ಕನ್ನಡತಿ ರಶ್ಮಿಕಾ ಮಂದಣ್ಣ ಲಕ್ಕಿ ನಟಿ, ಸಾಕಷ್ಟು ಬಿಗ್ ಸ್ಟಾರ್ಸ್ ಜತೆ ನಟಿಸಲು ಅವಕಾಶಗಳು ಅರಸಿ ಬರುತ್ತಿದೆ. ರಣ್‌ಬೀರ್ ಕಪೂರ್, ಅಲ್ಲು ಅರ್ಜುನ್, ದಳಪತಿ ವಿಜಯ್, ಮಹೇಶ್ ಬಾಬು ನಂತರ ಈಗ ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ನಟಿಸಲು ರಶ್ಮಿಕಾ ಮಂದಣ್ಣಗೆ ಬುಲಾವ್ ಬಂದಿದೆ.
ಕಾಲಿವುಡ್ ನಟ ಚಿಯಾನ್ ವಿಕ್ರಮ್ ಮುಂದಿನ 61ನೇ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ. ಕಬಾಲಿ, ಕಾಲಾ ಖ್ಯಾತಿಯ ನಿರ್ದೇಶಕ ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಮತ್ತು ರಶ್ಮಿಕಾ ಜೋಡಿಯಾಗಿ ಮಿಂಚಲಿದ್ದಾರೆ. ಲಕ್ಕಿ ಹೀರೋಯಿನ್ ರಶ್ಮಿಕಾ, ವಿಕ್ರಮ್‌ಗೆ ನಾಯಕಿಯಾಗಿ ನಟಿಸೋದು ಸೂಕ್ತ ಎನಿಸಿ ಚಿತ್ರತಂಡ ಈ ಬಿಗ್ ಆಫರ್ ಅನ್ನು `ಪುಷ್ಪ’ ಬ್ಯೂಟಿಗೆ ಕೊಡಲಾಗಿದೆಯಂತೆ.ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಭಿನ್ನ ಕಥೆ ಮತ್ತು ಪಾತ್ರದ ಮೂಲಕ ರಂಜಿಸಲು ಚಿಯಾನ್ ವಿಕ್ರಮ್ ರೆಡಿಯಾಗಿದ್ದಾರೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಅಪ್‌ಡೇಟ್, ಚಿತ್ರತಂಡದಿಂದ ಹೊರ ಬೀಳಲಿದೆ.
Live Tv
[brid partner=56869869 player=32851 video=960834 autoplay=true]