L- ಬೋರ್ಡ್‌ ಕಾರಿಗೆ ಲಾರಿ ಡಿಕ್ಕಿ : ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

Public TV
1 Min Read
RCR CAR ACCIDENT 2

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಾಲಯ್ಯ ಕ್ಯಾಂಪ್ ಬಳಿ L-BOARD ಆಲ್ಟೋ ಕಾರಿಗೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನ ಆಂಧ್ರಪ್ರದೇಶ ಮೂಲದ ದೀಪ್(35), ಪೂರ್ಣಿಮಾ(30), ಜಶಿನ್(12) ಹಾಗೂ ಮಾಹಿನ್(7) ಎಂದು ಗುರುತಿಸಲಾಗಿದೆ. ತಂದೆ ತಾಯಿ ಇಬ್ಬರು ಮಕ್ಕಳು ಅಪಘಾತಕ್ಕೀಡಾಗಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಅಲ್ಲ: ಡಿಕೆಶಿಗೆ ಆರ್. ಅಶೋಕ್ ತಿರುಗೇಟು

RCR CAR ACCIDENT

ಬೆಂಗಳೂರಿನಿಂದ ಸಿಂಧನೂರು ಮಾರ್ಗವಾಗಿ ಹೈದರಾಬಾದ್‌ಗೆ ತೆರಳುತ್ತಿದ್ದ ಕುಟುಂಬ ದುರಂತ ಸಾವಿಗೀಡಾಗಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮೃತ ದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: 100 ಅಡಿಯಿಂದ ನರ್ಮದಾ ನದಿಗೆ ಬಿತ್ತು ಬಸ್ – 12 ಸಾವು, ಹಲವರು ಗಂಭೀರ

RCR CAR ACCIDENT 1

ಘಟನೆ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳದಲ್ಲಿ ವಾಹನ ದಟ್ಟಣೆಯಾಗಿದ್ದು, ಎರಡು ಜೆಸಿಬಿಗಳಿಂದ ಅಪಘಾತವಾದ ವಾಹನಗಳ ತೆರವು ಕಾರ್ಯಾಚರಣೆ ನಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *