ಚಂದನವನದಲ್ಲಿ ಸಿಂಪಲ್ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ, ಯುವ ಪ್ರತಿಭೆಗಳಿಗೆ ಸಾಥ್ ನೀಡುವುದರಲ್ಲಿ ಯಾವಾಗಲೂ ಮುಂದು. ಹೊಸ ಪ್ರತಿಭೆಗಳಿಗೆ, ವಿಭಿನ್ನ ಕಥೆಗೆ ಪರಂವಃ ಸ್ಟುಡಿಯೋಸ್ ಮೂಲಕ ಸಾಥ್ ನೀಡುತ್ತಾರೆ. ಈಗ `ಪಂಚತಂತ್ರ’ ಖ್ಯಾತಿಯ ವಿಹಾನ್‌ಗೆ ರಕ್ಷಿತ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ.

View this post on Instagram
ಕಳೆದ ಮೂರು ವರ್ಷಗಳ ಹಿಂದೆ ಯೋಗರಾಜ್ ಭಟ್ ನಿರ್ದೇಶನದಲ್ಲಿನ `ಪಂಚತಂತ್ರ’ ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ ವಿಶೇಷ ಕಥೆಯೊಂದಿಗೆ ಅವರ ಆಗಮನವಾಗುತ್ತಿದೆ. ರೊಮ್ಯಾನ್ಸ್ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳೂ ಈಗಾಗಲೇ ಶುರುವಾಗಿವೆ. ಈ ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳಿರಲಿವೆ. ಕಾಲೇಜ್ ವಿದ್ಯಾರ್ಥಿ, ಕ್ರಿಕೆಟ್ ಆಟಗಾರ ಹಾಗೂ ಬಿಜಿನೆಸ್ ಮ್ಯಾನ್ ಆಗಿಯೂ ವಿಹಾನ್ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದಕ್ಕೂ ಸೂಟ್ ಆಗಲಿದ್ದಾರೆ ಎಂಬ ಕಾರಣಕ್ಕೆ ಚಿತ್ರತಂಡ ವಿಹಾನ್‌ರನ್ನು ಆಯ್ಕೆ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರ ಕಥಾಸಂಗಮ ಸಿನಿಮಾದಲ್ಲಿನ `ರೇನ್‌ಬೋ ಲ್ಯಾಂಡ್’ ಏಪಿಸೋಡ್ ಅನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದರು. ಈಗ ಈ ಹೊಸ ಸಿನಿಮಾಗೆ ಚಂದ್ರಜಿತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಹಾನ್‌ಗೆ ನಾಯಕಿಯಾಗಿ `ನಮ್ಮನ್ನೆ ಯುವರಾಣಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಅಮರ್ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಪರಮ್‌ವಾ ಸ್ಟುಡಿಯೋಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರ ಜನ್ಮದಿನಕ್ಕೆ ಪೋಸ್ಟ್ ಹಾಕಿ ಸುಳಿವು ನೀಡಿತ್ತು. ಇದೀಗ ಅವರೇ ನಮ್ಮ ನಾಯಕಿ ಎಂದು ತಂಡ ಅಧಿಕೃತವಾಗಿ ಘೋಷನೆ ಮಾಡಲಾಗಿತ್ತು. ಇನ್ನು ಚಿತ್ರದ ಶೂಟಿಂಗ್ ಸೆಪ್ಟೆಂಬರ್‌ನಲ್ಲಿ ಶುರುವಾಗಲಿದೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ನೀಲಕಂಠ’ ನಟಿ ನಮಿತಾ



