ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

Public TV
2 Min Read
Helicopter 1

ನವದೆಹಲಿ: ಭಾರತೀಯ ಮಿಲಿಟರಿ ಹಾರ್ಡ್ವೇರ್ ವಲಯದಲ್ಲಿ `ಆತ್ಮ ನಿರ್ಭರ ಭಾರತ್’ಗೆ ಉತ್ತೇನ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದ್ದು, ಅದಕ್ಕಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ (DAP) ಕೈಪಿಡಿಯನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಖಾಸಗಿ ವಲಯವು ಭಾರತೀಯ ರಕ್ಷಣಾ PSUಗಳೊಂದಿಗೆ (ಸಾರ್ವಜನಿಕ ವಲಯದ ಉದ್ಯಮ) ಅಗತ್ಯವಿರುದ್ಧ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿದೆ.

Helicopter 3

ಅಧಿಕಾರಿಗಳ ಪ್ರಕಾರ, ಉದ್ಯಮದಲ್ಲಿನ ಈ ಸಹಯೋಗವನ್ನು ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್ (IMRH) ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ಪರೀಕ್ಷಿಸಲಾಗುತ್ತದೆ. ಅಂತಿಮವಾಗಿ ಭಾರತೀಯ ಮಿಲಿಟರಿಯ ಪ್ರಸ್ತುತ ದಾಸ್ತಾನುಗಳಲ್ಲಿ ರಷ್ಯಾದ ನಿರ್ಮಿತ ಎಲ್ಲಾ Mi-17 ಮತ್ತು Mi-8 ಹೆಲಿಕಾಪ್ಟರ್‌ಗಳನ್ನು ಬದಲಾಯಿಸುತ್ತದೆ. ಇದರೊಂದಿಗೆ ವಾಯು ದಾಳಿ, ಜಲಾಂತರ್ಗಾಮಿ ನೌಕೆಗಳು, ಮಿಲಿಟರಿ ಸಾರಿಗೆ ಹಾಗೂ ಮೊದಲಾದ ವಿಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದನ್ನೂ ಓದಿ: ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಖಾಸಗಿ ವಲಯದ ಕಂಪನಿಗಳು ಈಗಾಗಲೇ ಯೋಜನೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದು, ಮುಂದಿನ 7 ವರ್ಷಗಳಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ ಪ್ರಾರಂಭಿಸಲು ರಕ್ಷಣಾ ಸಚಿವಾಲಯ ತಿಳಿಸಿದೆ. ಫ್ರೆಂಚ್ ಸಫ್ರಾನ್ ಕಂಪನಿಯು ಈಗಾಗಲೇ (ಜುಲೈ 8ರಂದು) ಭಾರತೀಯ HAL ಸಹಿಹಾಕಿದೆ. ಈ ಮೂಲಕ ನೌಕಾರೂಪ ಸೇರಿದಂತೆ IMRH ಎಂಜಿನ್ ಅನ್ನು ಉತ್ಪಾದಿಸಿ, ಅಭಿವೃದ್ಧಿಪಡಿಸಲು ಹಾಗೂ ಹೊಸದಾಗಿ ಜಂಟಿ ಉದ್ಯಮ ಸೃಷ್ಟಿಸಲು ಮುಂದಾಗಿವೆ ಎಂದು ಮಾಧ್ಯಮಗಳು ವರದಿಮಾಡಿವೆ.

Helicopter 2

ಖಾಸಗಿ ವಲಯದ ಕಂಪೆನಿಗಳು ಉತ್ಪಾದನೆಯ ಶೇ.25 ಪ್ರತಿಶತವನ್ನು 3ನೇ ದೇಶಗಳಿಗೆ ರಫ್ತುಮಾಡಲು ಹಾಗೂ ವಿದೇಶಿ ವಿನಿಮಯವನ್ನೂ ಮಾಡಿಕೊಳ್ಳಲು ಅನುಮತಿಸಲಾಗುತ್ತದೆ. ಅಭಿವೃದ್ಧಿ ಹೊಂದಿದ IMRH ಅನ್ನು ಖರೀದಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ತಿಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹೆಲಿಕಾಪ್ಟರ್ ತಯಾರಿಸಿದರೆ, ಸಮಯಕ್ಕೆ ಮುಂಚಿತವಾಗಿ ಖರೀದಿಸುವಂತೆ ಖಾಸಗಿ ಕಂಪನಿಗಳು ಕೋರಿವೆ.

ಖಾಸಗಿ ವಲಯವು ಶೇ.51 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಭಾರತೀಯ ಪಿಎಸ್‌ಯು ಗಳೊಂದಿಗೆ ಜಂಟಿ ಉದ್ಯಮ ರೂಪಿಸಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಮಾಂಸ ಎಸೆದ ದುಷ್ಕರ್ಮಿಗಳು- 3 ಮಾಂಸದ ಅಂಗಡಿಗಳಿಗೆ ಬೆಂಕಿ

IMRH ಮುಂಬರುವ 5 ರಿಂದ 7 ವರ್ಷಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಹೊರತರುವ ನಿರೀಕ್ಷೆಯಿದೆ. ಭಾರತೀಯ ನೌಕಾಪಡೆಯು ತನ್ನ ಮೊದಲ ಜಲಾಂತರ್ಗಾಮಿ ವಿರೋಧಿ ಯುದ್ಧದ ಸಿರ್ಕೋರ್ಸ್ಕಿ MH-60R ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ವಿತರಿಸುವ ನಿರೀಕ್ಷೆಯಿದೆ. ಮೊದಲ 2-3 ಹೆಲಿಕಾಪ್ಟರ್‌ಗಳನ್ನು ಈಗಾಗಲೇ USನ  ಸ್ಯಾನ್ ಡಿಯಾಗೋ ನೌಕಾ ನಿಲ್ದಾಣದಿಂದ ತರಬೇತಿ ಉದ್ದೇಶಗಳಿಗಾಗಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಉಳಿದ 21 ಹೆಲಿಕಾಪ್ಟರ್‌ಗಳ ವಿತರಣೆಗಳು 2.3 ಶತಕೋಟಿ ಡಾಲರ್ ಫೆಬ್ರವರಿ 2020ರ ಒಪ್ಪಂದದಂತೆ ಆಗಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *