ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ

Public TV
1 Min Read
CRIME DHRRWADA

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಚಾಕುವಿನಿಂದ ಇರಿದ ಪ್ರೇಮಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದ್ದು, ಪ್ರಿಯಕರ ವಿಜಯ್ ಕದಂ ತನ್ನ ಪ್ರೇಯಸಿ ಪದ್ಮಾಳನ್ನು ಚಾಕುವಿನಿಂದ ಇರಿದಿದ್ದಾನೆ. ಆದರೆ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ನಡುವೆ ಉಪನಗರ ಠಾಣೆಗೆ ವಿಜಯ್ ತಾನೇ ಹೋಗಿ ಶರಣಾಗಿದ್ದಾನೆ.

CRIME DHRRWADA 1

ನಡೆದಿದ್ದೇನು?
ರಾಮಸೇನಾ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷನಾಗಿ ವಿಜಯ್ ಕೆಲಸ ಮಾಡುತ್ತಿದ್ದ. ಪದ್ಮಾ ಮತ್ತು ವಿಜಯ್ ಇಬ್ಬರು ಪ್ರೀತಿಸುತ್ತಿದ್ದು ಕಳೆದ 7 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಇದನ್ನೂ ಓದಿ:  ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್ 

ಈ ಹಿನ್ನೆಲೆ ವಿಜಯ್ ಜಗಳದ ವೀಡಿಯೋ ಸಹ ಮಾಡಿದ್ದು, ಇಬ್ಬರು ವಾದ-ಪ್ರತಿವಾದ ಮಾಡುತ್ತಿರುವುದು ಸೆರೆಯಾಗಿದೆ. ಈ ವೇಳೆ ಪದ್ಮಾ ಕೈ ನರ ಕಟ್ ಮಾಡಿಕೊಳ್ಳುವ ಧಮಕಿ ಹಾಕಿದ್ದು, ಜಗಳ ತಾರಕಕ್ಕೇರಿ ಅದೇ ಚಾಕುದಿಂದ ವಿಜಯ್ ಚುಚ್ಚಿದ್ದಾನೆ.

CRIME DHRRWADA 2

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪದ್ಮಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *