ತೆಲುಗು ಸಿನಿಮಾ ರಂಗದ ಖ್ಯಾತ ಯುವ ನಟ ವಿಜಯ್ ದೇವರಕೊಂಡ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಸಿನಿಮಾಗಳಿಗಿಂತಲೂ ಇವರು ಖಾಸಗಿ ವಿಚಾರಕ್ಕಾಗಿ ಹೆಚ್ಚು ಸದ್ದಾಗುತ್ತಾರೆ. ಅದರಲ್ಲೂ ತಾವು ಮಾಡದೇ ಇರುವ ತಪ್ಪಿಗಾಗಿಯೂ ಹೆಚ್ಚು ಸುದ್ದಿ ಆಗುತ್ತಾರೆ. ಇದೀಗ ಡೇಟಿಂಗ್ ವಿಚಾರವಾಗಿ ಮಾಧ್ಯಮಗಳಿಗೆ ಆಹಾರವಾಗಿದ್ದಾರೆ. ಅದೂ ಕೂಡ ತಾವು ಆಡದೇ ಇರುವ ಮಾತಿನಿಂದಾಗಿ ಎನ್ನುವುದು ವಿಶೇಷ.
ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಾರಾ ಅಲಿಖಾನ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದು, ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮತ್ತು ಸಾರಾ ಆಲಿಖಾನ್ ಬಗ್ಗೆ ಸಲ್ಲದ ಸಂಶಯಗಳು ಶುರುವಾಗಿವೆ. ವಿಜಯ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಮಿಂಚುತ್ತಿರುವುದರಿಂದ, ಇದು ಸಾಧ್ಯವೂ ಆಗಬಹುದು ಎನ್ನುವ ಗಾಸಿಪ್ ಹರಡಿದೆ. ಇದನ್ನೂ ಓದಿ:ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ
ವಿಜಯ್ ಜೊತೆ ಡೇಟಿಂಗ್ ಮಾಡುತ್ತೇನೆ ಅಂದವರು ಸಾರಾ ಅಲಿಖಾನ್, ಅನಿಸಿಕೊಂಡವರು ವಿಜಯ್ ದೇವರಕೊಂಡ. ಆದರೆ, ಈ ವಿಷಯದಲ್ಲಿ ಹೆಚ್ಚು ಟ್ರೋಲ್ ಗೆ ತುತ್ತಾಗಿದ್ದು ಮಾತ್ರ ರಶ್ಮಿಕಾ ಮಂದಣ್ಣ. ವಿಜಯ್ ಜೊತೆ ರಶ್ಮಿಕಾ ತುಂಬಾ ಕ್ಲೋಸ್. ಹೀಗಾಗಿ ರಶ್ಮಿಕಾನಿಂದ ಸಾರಾ ಅವರು ವಿಜಯ್ ದೇವರಕೊಂಡ ಅವರನ್ನು ಕಿತ್ತುಕೊಳ್ಳುತ್ತಾರೆ ಎನ್ನುವ ಅರ್ಥ ಬರುವಂತೆ ಟ್ರೋಲ್ ಮಾಡಲಾಗುತ್ತಿದೆ.