ತಿರುವನಂತಪುರಂ: ದೇಶದ ಅತ್ಯಂತ ಕಿರಿಯ ಮೇಯರ್ ಹಾಗೂ ರಾಜ್ಯದ ಅತ್ಯಂತ ಕಿರಿಯ ಶಾಸಕರಿಬ್ಬರು ಸೆ. 14ರಂದು ಮದುವೆಯಾಗಲಿದ್ದಾರೆ. ಈ ರೀತಿಯ ಅಪರೂಪದ ಬಂಧನಕ್ಕೆ ಕೇರಳ ಸಾಕ್ಷಿಯಾಗಲಿದೆ.
ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಬಲುಸ್ಸೆರಿಯ(21) ಹಾಗೂ ಸಚಿನ್(28) ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಇವರಿಬ್ಬರು ಈ ವರ್ಷದ ಮಾರ್ಚ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸೆ.14ರಂದು ಬೆಳಗ್ಗೆ 11ಗಂಟೆಗೆ ಕೇರಳದ ಎಕೆಜಿ ಹಾಲ್‍ನಲ್ಲಿ ಮದುವೆ ನಿಗದಿಯಾಗಿದೆ. ಕೇರಳದ ಕಮ್ಯುಸಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದರು.
ಆರ್ಯಾ ರಾಜೇಂದ್ರನ್ ಅವರು ತಮ್ಮ 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಲ್ಲಿ ಅಧಿಕ ನೀರು ಹೊರಕ್ಕೆ- ನಂಜನಗೂಡಿನಲ್ಲಿ ಪ್ರವಾಹ ಭೀತಿ
ಎಸ್‍ಎಸ್‍ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್ ದೇವ್ ಕೊಯಿಕ್ಕೋಡ್‍ನನೆಲ್ಲಿಕೋಡ್ ಮೂಲದವರಾಗಿದ್ದಾರೆ. ಎಸ್‍ಎಸ್‍ಐನ ರಾಜ್ಯಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್ ಅವರು ಕೊಯಿಕ್ಕೂಡ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಹಾಗೂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ