ಲಕ್ನೋ: 5 ವರ್ಷದ ಶಾಲಾ ವಿದ್ಯಾರ್ಥಿ ತರಗತಿಯಲ್ಲಿದ್ದಾಗಲೇ ಶಾಲೆಗೆ ಬೀಗ ಹಾಕಿ ಶಾಲಾ ಸಿಬ್ಬಂದಿ ಮನೆಗೆ ತೆರಳಿದ ಘಟನೆ ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಆದಿತ್ಯ ಎಂಬಾತ ಶಾಲೆಯಲ್ಲೆ ಇದ್ದ ವಿದ್ಯಾರ್ಥಿ. ಶಾಲೆ ಮುಗಿದು ಸಂಜೆಯಾದರೂ ಮಗು ಬಾರದಿರುವುದನ್ನು ನೋಡಿ ಪೋಷಕರು ಗಾಬರಿಗೊಂಡಿದ್ದಾರೆ. ಇದಾದ ಬಳಿಕ ಆದಿತ್ಯನಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ವೇಳೆ ಆತ ಶಾಲೆಯಲ್ಲೇ ಇರುವುದಾಗಿ ಅನುಮಾನಗೊಂಡು ಶಾಲೆಯತ್ತ ಹೋಗಿದ್ದಾರೆ. ಅಲ್ಲಿಯೇ ಇರುವುದನ್ನು ಖಚಿತಪಡಿಸಿಕೊಂಡ ಆದಿತ್ಯನ ಪೋಷಕರು ಶಾಲೆಯ ಕೊಠಡಿಯ ಬಾಗಿಲನ್ನು ಒಡೆದು ಮಗುವನ್ನು ರಕ್ಷಿಸಿದ್ದಾರೆ.
ಮಗು ತರಗತಿಯಲ್ಲಿ ಸಹಾಯಕ್ಕಾಗಿ ಅಳುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿ ಮಾತನಾಡಿದ ಶಾಲೆಯ ಮುಖ್ಯಸ್ಥರು, ಶಾಲೆ ಸಮಯ ಮುಗಿದ ನಂತರ, ನಾವು ಯಾವಾಗಲೂ ಹೊರಡುವ ಮೊದಲು ಕೊಠಡಿಗಳನ್ನು ಪರಿಶೀಲಿಸುತ್ತೇವೆ. ಆದರೆ ಆ ವಿದ್ಯಾರ್ಥಿಯು ನಿದ್ರಿಸಿದ್ದರಿಂದ ನಾವು ಅವನನ್ನು ಗುರುತಿಸಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!
ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಇತರ ಐವರು ಅಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಗುಂಡಿನ ದಾಳಿ- 15 ಮಂದಿ ಸ್ಥಳದಲ್ಲೇ ಸಾವು