ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ತೆಲುಗು ನಟಿ ಅಮಲಾ ಪೌಲ್, ಬಹುಬೇಡಿಕೆಯ ನಟಿಯಾಗಿ ಸಿನಿಮಾ ರಂಗವನ್ನು ಆಳಿದರು. ಬೇಡಿಕೆ ಇರುವಾಗಲೇ ನಿರ್ದೇಶಕ ವಿಜಯ್ ಅವರ ಜೊತೆ ಮದುವೆಯಾದರು. ಹೊಸ ಬದುಕಿಗೆ ಕಾಲಿಟ್ಟ ನಂತರ ಅವರ ಜೀವನ ಹೊಸ ರೂಪ ಪಡೆದುಕೊಳ್ಳುತ್ತಿದೆ ಎಂದೇ ಎಲ್ಲರೂ ನಂಬಿದ್ದರು. ಆದರೆ, ಎಲ್ಲರೂ ಅಂದುಕೊಂಡಂತೆ ಏನೂ ಆಗಲಿಲ್ಲ. ವಿಜಯ್ ಅವರ ಜೊತೆ ಮೂರ್ನಾಲ್ಕು ವರ್ಷಗಳ ಕಾಲ ಸತಿಪತಿಗಳಾಗಿ ಇದ್ದವರು ದಿಢೀರ್ ಅಂತ ಡಿವೋರ್ಸ್ ಘೋಷಣೆ ಮಾಡಿದರು.
ವಿಜಯ್ ಮತ್ತು ಅಮಲಾ ಪೌಲ್ ಅವರು ವಿಚ್ಛೇದನ ವಿಷಯ ದೊಡ್ಡ ಮಟ್ಟದಲ್ಲಿ ಆಘಾತ ನೀಡಿತ್ತು. ಅನೋನ್ಯವಾಗಿದ್ದ ದಂಪತಿಗಳ ನಡುವೆ ಆಗಿದ್ದು ಏನು ಎನ್ನುವ ವಿಚಾರಕ್ಕೆ ನಾನಾ ರೆಕ್ಕೆಪುಕ್ಕಗಳು ಹುಟ್ಟಿದವು. ಯಾವುದಕ್ಕೂ ಪ್ರತಿಕ್ರಿಯಿಸದೇ ಐದು ವರ್ಷಗಳ ಹಿಂದೆ ಈ ಜೋಡಿ ದೂರವಾಯಿತು. ಆನಂತರ ಅಮಲಾ ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದರೆ, ಆ ಕುರಿತು ಅವರು ಏನೂ ಹೇಳಲಿಲ್ಲ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ಇದೀಗ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅಮಲಾ ಪೌಲ್, ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿರುವ ಕುರಿತು ಸಣ್ಣದೊಂದು ಸುಳಿವು ಕೊಟ್ಟಿದ್ದಾರೆ. ಒಬ್ಬರನೊಬ್ಬರು ನಂಬುವಂತಹ ಹುಡುಗ ಸಿಗಬೇಕು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಉತ್ತರ ತೆಲುವು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ.