ಕೊಲೊಂಬೊ: ಪಾಸ್‍ಪೋರ್ಟ್‍ಗಾಗಿ ಕಳೆದ 2 ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ದ್ವೀಪರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಶ್ರೀಲಂಕಾ ಬಿಟ್ಟು ವಿದೇಶದಲ್ಲಿ ಹೋಗಿ ಅಲ್ಲಿ ಉದ್ಯೋಗ ಪಡೆಯಬೇಕೆಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾಸ್‍ಪೋರ್ಟ್ ಪಡೆಯಲು ಕಳೆದ 2 ದಿನಗಳಿಂದ ಸರತಿ ಸಾಲಿನಲ್ಲಿದ್ದರು. ಆದರೆ ಇವರಿಗೆ ಅಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ.
ಅಲ್ಲೇ ಇದ್ದ ಶ್ರೀಲಂಕಾ ಸೇನೆಯ ಸಿಬ್ಬಂದಿಯೊಬ್ಬರು ಇದನ್ನು ಗಮನಿಸಿ ಮಹಿಳೆಯನ್ನು ತಕ್ಷಣ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ
ಜನವರಿ ಅಂತ್ಯದ ವೇಳೆಗೆ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ, ಪಾಸ್‍ಪೋರ್ಟ್‍ಗಳನ್ನು ಪಡೆಯಲು ಉದ್ದನೆಯ ಸಾಲುಗಳು ಪಾಸ್‍ಪೋರ್ಟ್ ಕಚೇರಿಯಲ್ಲಿ ನಿಯಮಿತವಾಗಿ ಕಂಡುಬರುತ್ತಿವೆ. ಒಂದು ದಿನದ ಸಂಚಿಕೆ ಸೇವೆಯಲ್ಲಿ ಹೆಚ್ಚಿನ ಜನರು ಪಾಸ್‍ಪೋರ್ಟ್‍ಗಳನ್ನು ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಡೀಸೆಲ್‌ಗಾಗಿ ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರದಿಯಲ್ಲಿ ನಿಂತಿದ್ದ 63 ವಯಸ್ಸಿನ ಟ್ರಕ್ ಚಾಲಕ ಶ್ರೀಲಂಕಾದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್