ದಾವಣಗೆರೆ: ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 1 ಕೋಟಿ ದಂಡ ವಸೂಲಿಯಾಗಿದೆ. ದಾವಣಗೆರೆ ಉತ್ತರ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ರೂ. ದಂಡ ವಸೂಲಿ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಸಂಚಾರ ಸುರಕ್ಷತೆ ದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ತ್ರಿಬಲ್ ರೈಡ್‍ಗೂ ಭಾರೀ ಪ್ರಮಾಣದ ದಂಡ ವಸೂಲಿ ಆಗಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರ ಮೇಲೆ ದಂಡ ಪ್ರಯೋಗ ಮಾಡಲು ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್
ದಾವಣಗೆರೆ ಜಿಲ್ಲಾ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರಿಂದ ಆರು ತಿಂಗಳಲ್ಲಿ ಒಟ್ಟು 25,088 ಕೇಸ್‍ಗಳಲ್ಲಿ 1 ಕೋಟಿ 3 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ. ಇದಲ್ಲದೆ 83 ತ್ರಿಬಲ್ ರೈಡಿಂಗ್, 76 ರ‍್ಯಾಶ್ ಡ್ರೈವಿಂಗ್‍ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ಇದಲ್ಲದೆ ದಾವಣಗೆರೆ ನಗರದಲ್ಲಿ ಕರ್ಕಷವಾಗಿ ಶಬ್ಧ ಮಾಡುತ್ತಿದ್ದ ಬುಲೆಟ್‍ಗಳಿಗೆ ಅಳವಡಿಸಿದ್ದ 52 ಸೈಲೆನ್ಸರ್ ಪೈಪ್‍ಗಳನ್ನು ವಶಕ್ಕೆ ಪಡೆದು ಎಸ್.ಪಿ.ಸಿಬಿರಿಷ್ಯಂತ್ ಸಮ್ಮುಖದಲ್ಲಿ ರೋಲರ್ ಹತ್ತಿಸುವ ಮೂಲಕ ನಾಶ ಪಡಿಸಿದ್ರು. ಸಂಚಾರಿ ಠಾಣೆ ಪೊಲೀಸರ ಈ ಸಾಧನೆಗೆ ಎಸ್‍ಪಿಸಿಬಿ ರಿಷ್ಯಂತ್ ಅಭಿನಂಧನೆ ತಿಳಿಸಿದರು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ