ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

Public TV
2 Min Read
TAILOR

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಹತ್ಯೆಯಾದ ಕನ್ಹಯ್ಯ ಲಾಲ್ ಅವರ ಕುಟುಂಬಕ್ಕೆ ಸಹಾಯ ಮಾಡಲು ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಿಧಿ ಸಂಗ್ರಹ ಮಾಡಿದ್ದಾರೆ. ದೇಶಾದ್ಯಂತ ಹಲವು ಮಂದಿ ದೇಣಿಗೆ ನೀಡಿದ್ದು 1 ಕೋಟಿ ರೂ. ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ, 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗೂ ಹೆಚ್ಚು ಹಣ ಸಂಗ್ರಹವಾಗಿದೆ. ಕನ್ಹಯ್ಯ ಹತ್ಯೆಯಿಂದ ನಮ್ಮ ಕಣ್ಣೀರನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ನಾವೆಲ್ಲಾ ಹಿಂದೂಗಳು ಕನ್ಹಯ್ಯಾ ಅವರ ಕುಟುಂಬದ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ: ಟಿಕಾಯತ್

ಇದರೊಂದಿಗೆ ಹನ್ಹಯ್ಯ ಲಾಲ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ, ಗಂಭೀರವಾಗಿ ಗಾಯಗೊಂಡು ಮಹಾರಾಣಾ ಭೋಪಾಲ್ ಸಿಂಗ್ ಆಸ್ಪತ್ರೆಗೆ  ದಾಖಲಾಗಿರುವ ಈಶ್ವರ್ ಸಿಂಗ್ ಅವರಿಗೂ 25 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

Gaus Mohammed and Riyaz Ahmed 1

ಕನ್ಹಯ್ಯ ಲಾಲ್ ಹತ್ಯೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭವಾಗುತ್ತಲೇ ರಾಜಸ್ಥಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಭೆ ಕರೆದಿದ್ದು, ಇದನ್ನು ಬಿಜೆಪಿ ಬಹಿಷ್ಕರಿಸಿದೆ. ಗುರುವಾರ ರಾಜಸ್ಥಾನದಲ್ಲಿ ಬಂದ್ ಘೋಷಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಪೊಲೀಸ್ ಪಡೆಗಳ ನಿಯೋಜನೆಯನ್ನು ಹೆಚ್ಚಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *