ಎರಡು ದಿನದ ಒಗ್ಗಟ್ಟಿನ ಮಂತ್ರದ ಬಳಿಕ ಕಾಂಗ್ರೆಸ್‍ನಲ್ಲಿ ಈಗ ಅಸಮಾಧಾನದ ಹೊಗೆ

Public TV
1 Min Read
KUTHHURU MANJUNATH RAHULGANDHI SIDDRAMAHIHA

ಬೆಂಗಳೂರು: ಚುನಾವಣಾ ವರ್ಷದಲ್ಲಿ ದೆಹಲಿ ಅಂಗಳದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಆದರೆ ಅದರ ಮರುದಿನವೇ ಕೈ ಪಾಳಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.

KUTHHURU MANJUNATH RAHULGANDHI 2

ಸಿದ್ದರಾಮಯ್ಯ & ಟೀಂ ವಿರುದ್ಧ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಸಿಡಿದೆದ್ದಿದ್ದಾರೆ. ಕೋಲಾರ ನಾಯಕರ ನಿಯೋಗ ಕೊಂಡೊಯ್ದು ರಾಹುಲ್ ಗಾಂಧಿ ಭೇಟಿ ಮಾಡಿಸಿದ್ದಕ್ಕೆ ಗರಂ ಆಗಿರುವ ಕೆ.ಹೆಚ್.ಮುನಿಯಪ್ಪ, ಈಗಾಗಲೇ ದೆಹಲಿ ತಲುಪಿದ್ದು ರಾಹುಲ್ ಗಾಂಧಿ ಭೇಟಿಗೆ ಪ್ರತ್ಯೇಕ ಸಮಯ ಕೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಕೊತ್ತೂರು ಮಂಜುನಾಥ್, ಎಂ.ಸಿ. ಸುಧಾಕರ್

ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಎಲ್ಲಾ ನಾಯಕರ ನಿಯೋಗ ಹೈಕಮಾಂಡ್ ಭೇಟಿ ಮಾಡುವಾಗ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಮುನಿಸಿಕೊಂಡಿದ್ದಾರೆ. ಅದರಲ್ಲೂ ಕೊತ್ತೂರು ಮಂಜುನಾಥ್ ಪಕ್ಷ ಸೇರ್ಪಡೆ ಹಾಗೂ ರಾಹುಲ್ ಗಾಂಧಿ ಭೇಟಿ ವಿಚಾರದಲ್ಲಿ ಕೇವಲ ರಮೇಶ್ ಕುಮಾರ್ ಮಾತಿಗೆ ಮಣೆ ಹಾಕಿದ್ದಾರೆ ಎಂದು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

MUNIYAPPA 1

ಸಿದ್ದರಾಮಯ್ಯ, ರಮೇಶ್ ಕುಮಾರ್ ಮಾತು ಕೇಳಿಕೊಂಡು ರಾಹುಲ್ ಗಾಂಧಿ ಭೇಟಿಗೆ ಮುಂದಾಗಿದ್ದಾರೆ ಎಂದು ಅಸಮಧಾನಗೊಂಡು ರಾಹುಲ್ ಗಾಂಧಿ ಭೇಟಿಗೆ ದೆಹಲಿಯಲ್ಲಿ ಕಾದು ಕುಳಿತಿದ್ದಾರೆ. ಕೋಲಾರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ರಮೇಶ್ ಕುಮಾರ್ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿ ಹಾಗೂ ಕೆಪಿಸಿಸಿ ಎರಡಕ್ಕೂ ಕೆ.ಹೆಚ್.ಮುನಿಯಪ್ಪ ದೂರು ನೀಡಿದ್ದರು. ಇದನ್ನೂ ಓದಿ: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

ರಮೇಶ್ ಕುಮಾರ್ ವಿರುದ್ಧ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಆದರೆ ಈಗ ಅವರ ನೇತೃತ್ವದಲ್ಲೇ ಬೇರೆಯವರು ಪಕ್ಷ ಸೇರ್ಪಡೆಗೆ ಸಿದ್ಧತೆ ಮಾಡುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಮಣೆ ಹಾಕಿ ಹಿರಿಯ ನಾಯಕನಾಗಿರುವ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಮುನಿಯಪ್ಪ ಮುನಿಸಿಕೊಂಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *