ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು `ಸರ್ಕಾರು ವಾರಿ ಪಾಟ’ ಯಶಸ್ಸಿನ ನಂತರ ತಮ್ಮ ಕುಟುಂಬದ ಜತೆ ವಿದೇಶಕ್ಕೆ ಹಾರಿದ್ದಾರೆ. ಈ ವೇಳೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಮಹೇಶ್ ಬಾಬು ಭೇಟಿಯಾಗಿದ್ದಾರೆ. ಜತೆಗೆ ಪತ್ನಿ ನಮೃತಾ ಕೂಡ ಸಾಥ್ ನೀಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
View this post on Instagram
`ಸರ್ಕಾರು ವಾರಿ ಪಾಟ’ ಸಕ್ಸಸ್ ನಂತರ ಮಹೇಶ್ ಬಾಬು ಮತ್ತು ಅವರ ಕುಟುಂಬ ವಿದೇಶಕ್ಕೆ ಹರಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶಕ್ಕೆ ತೆರೆಳಿದ್ದಾರೆ. ಈ ವೇಳೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಪ್ರಿನ್ಸ್ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಭೇಟಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಬರೆದುಕೊಂಡಿದ್ದಾರೆ.
View this post on Instagram
`ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಇವರು ಒಬ್ಬರು. ನಿಜಕ್ಕೂ ಇವರೂ ಸ್ಪೂರ್ತಿ’ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ. ಇನ್ನು ಇವರಿಬ್ಬರ ಭೇಟಿಯ ಬೆನ್ನಲ್ಲೇ ಬೆಲ್ ಗೇಟ್ಸ್ ಬಯೋಪಿಕ್ ಕುರಿತು ಸಖತ್ ಸದ್ದು ಮಾಡುತ್ತಿದೆ. ಅದಕ್ಕಾಗಿ ಮಹೇಶ್ ಬಾಬು ಮತ್ತು ಬಿಲ್ ಗೇಟ್ಸ್ ಭೇಟಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ನಲ್ಲಿ ಅದೇನೇ ಇರಲಿ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ಸದ್ದು ಮಾಡುತ್ತಿದೆ.