ಮುಂಬೈ: ಬಹುಮತ ಇಲ್ಲದಿದ್ದರೂ, ಉದ್ಧವ್ ಠಾಕ್ರೆ ಕಾದು ಕುಳಿತಿರುವುದು ಏಕೆ? ಎನ್ನುವುದು ಈಗ ಬಹು ಚರ್ಚಿತ ವಿಷಯವಾಗಿದೆ. 51 ಶಾಸಕರು ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದ್ದು ಮಹಾಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವುದು ಕನಸಿನ ಮಾತಾಗಿದೆ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಉದ್ಧವ್ ಠಾಕ್ರೆ ಸಿಎಂ ಕುರ್ಚಿಗೆ ಅಂಟಿ ಕುಳಿತಿರುವುದಕ್ಕೆ ಎನ್‍ಸಿಪಿಯ ಶರದ್ ಪವಾರ್ ಕಾರಣ ಅಂತ ತಿಳಿದು ಬಂದಿದೆ.
ಶನಿವಾರ ಸುಪ್ರೀಂಕೋರ್ಟ್‍ನಲ್ಲಿ ಹಿನ್ನೆಡೆಯಾದ ಬಳಿಕ 5 ಗಂಟೆಗೆ ವೀಡಿಯೋ ಭಾಷಣದ ಮೂಲಕ ರಾಜೀನಾಮೆ ನೀಡಲು ಉದ್ದವ್ ಠಾಕ್ರೆ ನಿರ್ಧರಿಸಿದರಂತೆ. ಆದರೆ, ಎನ್‍ಸಿಪಿ ನಾಯಕ ಶರದ್ ಪವಾರ್ ತಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಕರೆಂಟ್ ಶಾಕ್ – ಜು. 1ರಿಂದ ವಿದ್ಯುತ್ ದರ ಏರಿಕೆ
ಈ ಹಿಂದೆ ಪಕ್ಷದಲ್ಲಿ ಭಿನ್ನಮತ ಸ್ಫೋಟವಾದಾಗಲೂ ಠಾಕ್ರೆ ರಾಜೀನಾಮೆಗೆ ಮುಂದಾಗಿ, ಕಾಂಗ್ರೆಸ್-ಎನ್‍ಸಿಪಿ ನಾಯಕರ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಡೆಯವರೆಗೂ ಹೋರಾಟ ಮಾಡೋಣ ಅಂತ ಹೇಳಿದ್ದರಂತೆ. ಹೀಗಾಗಿ, ಅತೃಪ್ತರನ್ನ ಸಂಪರ್ಕಿಸಿ ಮತ್ತೆ ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನು ಉದ್ಧವ್ ಠಾಕ್ರೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಇಂಗ್ಲೆಂಡ್ ಪ್ರವಾಸ 8 ದಿನ ವಿಸ್ತರಣೆ
ಈ ಮಧ್ಯೆ ಅಲಿಬಾಗ್ ರ್‍ಯಾಲಿಯಲ್ಲಿ ಭಾಗಿಯಾಗಬೇಕಿರುವ ಕಾರಣ ಇವತ್ತು ಇ.ಡಿ. ವಿಚಾರಣೆಗೆ ಹಾಜರಾಗಲ್ಲ ಅಂತ ಸಂಜಯ್ ರಾವತ್ ಹೇಳಿದ್ದಾರೆ. ವಸತಿ ಯೋಜನೆಯೊಂದರಲ್ಲಿ ಪತ್ನಿ ಮತ್ತು ಸ್ನೇಹಿತರು ಅಕ್ರಮ ಎಸಗಿರುವ ಕಾರಣ ಸಂಜಯ್ ರಾವತ್‍ಗೆ ಇ.ಡಿ. ಇವತ್ತು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.