ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಬರೋಬ್ಬರಿ 1,150 ಜನರ ಪ್ರಾಣವನ್ನು ತೆಗೆದುಕೊಂಡಿತು. ಇದೀಗ ಭಾರೀ ನಷ್ಟ ಎದುರಿಸುತ್ತಿರುವ ತಾಲಿಬಾನ್ ಸರ್ಕಾರ ಅಮೆರಿಕಾಗೆ ಸಹಾಯ ಮಾಡಲು ಹಣಕಾಸಿನ ನಿರ್ಬಂಧವನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.
ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರು ಶನಿವಾರ ಕಾಬೂಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂತಹ ಕಷ್ಟದ ಸಮಯದಲ್ಲಿ ಅಫ್ಘಾನಿಸ್ತಾನದ ಹೆಪ್ಪುಗಟ್ಟಿದ ಆಸ್ತಿಗಳನ್ನು ಬಿಡುಗಡೆ ಮಾಡಲು ಹಾಗೂ ಅಫ್ಘಾನಿಸ್ತಾನದ ಬ್ಯಾಂಕುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಾವು ಅಮೆರಿಕಗೆ ಬೇಡಿಕೆ ಇಡುತ್ತಿದ್ದೇವೆ. ಇದರಿಂದಾಗಿ ಸಹಾಯ ಸಂಸ್ಥೆಗಳು ಸುಲಭವಾಗಿ ನಮಗೆ ಸಹಾಯವನ್ನು ತಲುಪಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ
ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕದಲ್ಲಿ ಹೆಪ್ಪುಗಟ್ಟಿರುವ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ ಆಸ್ತಿಯಲ್ಲಿ ಅರ್ಧದಷ್ಟು ಎಂದರೆ, 7 ಬಿಲಿಯನ್ ಡಾಲರ್(ಸುಮಾರು 54 ಸಾವಿರ ಕೋಟಿ ರೂ.) ಅನ್ನು ಮುಕ್ತಗೊಳಿಸಲು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು. ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಮತ್ತು ತಾಲಿಬಾನ್ ವಿರುದ್ಧದ ಭಯೋತ್ಪಾದನೆ ಸಂಬಂಧಿತ ಮೊಕದ್ದಮೆಗಳನ್ನು ಹೂಡಲು ಹಣವನ್ನು ವಿಭಜಿಸಿದರು ಎಂದು ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 1,150 ಜನರು ಸಾವನ್ನಪ್ಪಿದ್ದಾರೆ. 1,600 ಜನ ಗಾಯಗೊಂಡಿದ್ದಾರೆ ಸುಮಾರು 3,000 ಮನೆಗಳು ನಾಶವಾಗಿವೆ. ಸಾವನ್ನಪ್ಪಿರುವವರಲ್ಲಿ 121 ಮಕ್ಕಳು ಸೇರಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಆರಕ್ಷಕರಿಗೇ ಇಲ್ಲ ಸೋರದ ಸೂರು!
ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಭಾರತ ಅಗತ್ಯ ವಸ್ತುಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ನೆರವಿನಲ್ಲಿ ವಸತಿ ಕಳೆದುಕೊಂಡ ಕುಟುಂಬಗಳಿಗೆ ರಿಡ್ಜ್ ಟೆಂಟ್, ಮಲಗುವ ಚೀಲಗಳು, ಕಂಬಳಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ.