ಅಗ್ನಿಪಥ್ ಯೋಜನೆಗೆ ಸೇರಲು ಕಾಂಗ್ರೆಸ್ ನಾಯಕರ ಮಕ್ಕಳನ್ನು ನಾವು ಕೇಳಿಲ್ಲ: ಕಟೀಲ್

Public TV
1 Min Read
NALINKUMAR KATEEL

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಗೆ ಸೇರಲು ಕಾಂಗ್ರೆಸ್ ನಾಯಕರ ಮಕ್ಕಳನ್ನು ನಾವು ಕೇಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

INDIAN ARMY

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎನ್‍ಡಿಎ ಸರ್ಕಾರ ಬಂದ ಬಳಿಕ ಪರಿವರ್ತನೆ ಆರಂಭವಾಗಿದೆ. ನರೇಂದ್ರ ಮೋದಿಯವರು ತಂದ ಎಲ್ಲಾ ಯೋಜನೆ ವಿರೋಧಿಸಿದ್ದು ಕಾಂಗ್ರೆಸ್‍ನ ಸಾಧನೆ. ದೇಶಕ್ಕೆ ಒಳ್ಳೆಯದಾಗುವುದನ್ನು ವಿರೋಧಿಸೋದು ಕಾಂಗ್ರೆಸ್ ಮಾನಸಿಕತೆ. ಅಗ್ನಿಪಥ್ ಎನ್ನುವುದು ಸೈನ್ಯಕ್ಕೆ ಯುವಶಕ್ತಿ ಬರಬೇಕು ಎಂಬ ಯೋಜನೆ. ಎಲ್ಲರಿಗೂ ಮಿಲಿಟರಿ ಶಿಕ್ಷಣ ಸಿಗುವ ಮೂಲಕ ರಾಷ್ಟ್ರಭಕ್ತಿ ಜಾಗೃತವಾಗಬೇಕು. ನಾವು ಇದಕ್ಕೆ ಕಾಂಗ್ರೆಸ್‍ನವರ ಮಕ್ಕಳನ್ನು ಕೇಳಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಕ್ಲಾಸ್‌ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಕಳಿಸಿ ತಗಲಾಕ್ಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ

ದೇಶದಲ್ಲಿ ಉದ್ಯೋಗ ಬಯಸುವ ಮತ್ತು ಸೇನೆಯಲ್ಲಿ ಕೆಲಸ ಬಯಸುವವರನ್ನು ಕೇಳಿದ್ದೇವೆ. ಮುಂದಿನ ಯುವಜನತೆಯ ಭವಿಷ್ಯ ರೂಪಿಸಲು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಎಲ್ಲವನ್ನೂ ವಿರೋಧಿಸುವ ಮಾನಸಿಕತೆ ಹೊಂದಿದೆ. ಕಾಂಗ್ರೆಸ್ ದ್ವೇಷದ ಭಾವನೆ ಹೊಂದಿದ್ದು, ಗಲಭೆಗೆ ಪ್ರಚೋದನೆ ಕೊಡುತ್ತಿದೆ. ಕಾನೂನು ಮುರಿಯುವ ಘಟನೆಗಳ ಸೂತ್ರಧಾರಿಯಾಗಿ ಕಾಂಗ್ರೆಸ್ ಇದೆ. ಅರಾಜಕತೆ ಸ್ಪಷ್ಟಿಸಿ ಕಾನೂನು ಕೈಗೆತ್ತಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ಪಠ್ಯ ಪುಸ್ತಕದಲ್ಲಿ ಚಕ್ರತೀರ್ಥ ಕೊಟ್ಟಿದ್ದನ್ನು ಓದದೇ ಕಾಂಗ್ರೆಸ್ ಮೂರ್ಖತನದ ಪರಮಾವಧಿ ತೋರಿಸುತ್ತಿದೆ. ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳಲ್ಲ, ವಿರೋಧಪಕ್ಷ ಹೇಳಿದ್ದನ್ನು ಕೇಳಿ ಹಿಂದೆ ತೆಗೆಯಲ್ಲ. ನಾವು ಆಡಳಿತ ನಡೆಸೋರು, ಮುಖ್ಯಮಂತ್ರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಠ್ಯ ಪುಸ್ತಕದಲ್ಲಿ ನಿರ್ದಿಷ್ಟ ಸಿದ್ಧಾಂತಗಳನ್ನು ತಂದಿರೋದು ಕಾಂಗ್ರೆಸ್. ಹಾಗಾಗಿ ಪುಸ್ತಕದ ಒಳಗಿನ ವಿಷಯ ಮೊದಲು ತಿಳಿದುಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎನ್ನುವ ಬಿಜೆಪಿಯವರು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ?: ಕಾಂಗ್ರೆಸ್

Live Tv

Share This Article
Leave a Comment

Leave a Reply

Your email address will not be published. Required fields are marked *