ತಂಗಿಯನ್ನ ಚುಡಾಯಿಸಿದ್ದಕ್ಕೆ ಯುವಕನಿಗೆ ಮನಬಂದಂತೆ ಚಾಕುವಿನಿಂದ ಇರಿದ ಅಣ್ಣಂದಿರು

Public TV
1 Min Read
CRIME 5

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಂಗಿಯನ್ನ ಚುಡಾಯಿಸಿದ ಕಾರಣಕ್ಕಾಗಿ ಯುವಕನಿಗೆ ಯುವತಿಯ ಅಣ್ಣಂದಿರಿಬ್ಬರು ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ.

ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಚಂದ್ರಶೇಖರ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ. ಇದನ್ನೂ ಓದಿ: BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

CRIME

ನಡೆದಿದ್ದೇನು?: ಇರಿತಕ್ಕೊಳಗಾದ ಚಂದ್ರಶೇಖರ್ ಅದೇ ನಗರದ ಕಿರಣ್ ಹಾಗೂ ಅಭಿ ಎನ್ನುವವರ ತಂಗಿಯನ್ನು ಚುಡಾಯಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಅಣ್ಣಂದಿರೂ ಚಂದ್ರಶೇಖರ್‌ಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಎಷ್ಟು ಹೇಳಿದರೂ ಕೇಳದೇ ಇದ್ದರಿಂದ ಕೋಪಗೊಂಡ ಇಬ್ಬರು ಚಂದ್ರಶೇಖರ್‌ಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

ತೀವ್ರ ಗಾಯಗೊಂಡಿರುವ ಚಂದ್ರುವನ್ನು ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿಸುತ್ತಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *