ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

Public TV
1 Min Read
up wedding

ಲಕ್ನೋ: ಮದುವೆ ಮೆರವಣಿಗೆ ಸಂದರ್ಭದಲ್ಲಿ ವರನೊಬ್ಬ ಖುಷಿಯಿಂದ ಗುಂಡು ಹಾರಿಸಿದಾಗ ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮನೀಶ್ ಮಧೇಶಿಯಾ ವರ ಹಾಗೂ ಬಾಬು ಲಾಲ್ ಯಾದವ್ ಮೃತ ಸ್ನೇಹಿತ. ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ಈತನನ್ನು ಕುದುರೆ ಮೇಲೆ ಮರೆವಣಿಗೆ ಮಾಡಿದ್ದರು. ಆ ಸಂದರ್ಭದಲ್ಲಿ ಸುತ್ತಲೂ ಜನರು ಕೂಡಿಕೊಂಡಿದ್ದರು.

ಖುಷಿಯಿಂದ ಸಂಭ್ರಮಿಸುತ್ತಿದ್ದ ವರ ಮನೀಶ್ ಮಧೇಶಿಯಾ ತನ್ನ ಬಳಿ ಇದ್ದ ಸ್ನೇಹಿತ ಯಾದವ್‍ ಅವರ ಗನ್‍ನ್ನು ತೆಗೆದು ಗುಂಡು ಹಾರಿಸಿದ್ದಾನೆ. ಅಲ್ಲೇ ಇದ್ದ ಬಾಬು ಲಾಲ್ ಯಾದವ್‍ಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಬಾಬು ಲಾಲಾ ಯಾದವ್ ಯೋಧರಾಗಿದ್ದರು. ಈ ಘಟನೆ ಸಂಬಂಧಿಸಿದಂತೆ ಕ್ಯಾಮರಾದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

arrest

ತಕ್ಷಣ ಯಾದವ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಯಾದವ್ ಕುಟುಂಬ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೀಶ್‍ನನ್ನು ಬಂಧಿಸಿದ್ದಾರೆ ಹಾಗೂ ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

Live Tv

Share This Article
Leave a Comment

Leave a Reply

Your email address will not be published. Required fields are marked *