ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

Public TV
1 Min Read
UKRAINE 4

ಕೀವ್: ರಷ್ಯಾ ಯುದ್ಧ ಆರಂಭವಾದಾಗಿನಿಂದಲೂ ರಷ್ಯಾ ಉಕ್ರೇನ್ ಮೇಲೆ ಸತತವಾಗಿ ದಾಳಿ ನಡೆಸುತ್ತಲೇ ಇದೆ. ಈ ನಡುವೆ ಉಕ್ರೇನ್‌ನಲ್ಲಿರುವ 152 ಸಾಂಸ್ಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಯುಎನ್ ತಜ್ಞರು ದೃಢಪಡಿಸಿದ್ದಾರೆ ಎಂದು ಯುನೆಸ್ಕೋ ಸಾಂಸ್ಕೃತಿಕ ಸಂಸ್ಥೆ ತಿಳಿಸಿದೆ.

UKRAINE 1

ಅವುಗಳಲ್ಲಿ ವಸ್ತುಸಂಗ್ರಹಾಲಯಗಳು, ಸ್ಮಾರಕಗಳು, ಚರ್ಚ್‌ಗಳು, ಗ್ರಂಥಾಲಯಗಳು, ಧಾರ್ಮಿಕ ಕಟ್ಟಡಗಳು ಹಾಗೂ ಇತರ ಅಸಾಧಾರಣ ಕಟ್ಟಡಗಳೂ ಸೇರಿವೆ. ಕೆಲವು ಸಂಪೂರ್ಣ ಹಾನಿಯಾಗಿದ್ದಾರೆ, ಕೆಲವು ಭಾಗಶಃ ಹಾನಿಯಾಗಿವೆ ಎಂಬುದಾಗಿ ತಜ್ಞರ ವರದಿ ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ

UKRAINE 2

ಕಳೆದ ಫೆಬ್ರವರಿ 24 ರಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು. ಆಗಿನಿಂದಲೂ ರಷ್ಯಾ ಉಕ್ರೇನಿನ ತಾಣಗಳು ಹಾನಿಗೊಳಗಾಗಿವೆ. ಉಕ್ರೇನಿಯನ್ ಸಾಂಸ್ಕೃತಿಕ ತಾಣಗಳ ಮೇಲಿನ ಈ ಪುನರಾವರ್ತಿತ ದಾಳಿಗಳು ನಿಲ್ಲಬೇಕು. ಯಾವುದೇ ಸಂದರ್ಭದಲ್ಲಿಯೂ ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣಗಳನ್ನು ಗುರಿಯಾಗಿಸಬಾರದು ಎಂದು ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಜೌಲೆ ತಿಳಿಸಿದ್ದಾರೆ. ಇದನ್ನೂ ಓದಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್‌ ಪತ್ತೆ – ತಂತ್ರಜ್ಞಾನ ಭಾರತದಲ್ಲೂ ಲಭ್ಯ

ರಷ್ಯಾದ ಪಡೆಗಳು ಅಥವಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಉಕ್ರೇನ್ ಪಾರಂಪರಿಕ ತಾಣಗಳನ್ನು ನಾಶಪಡಿಸುವಲ್ಲಿ ತಪ್ಪಿತಸ್ಥರೆಂಬುದು ಕಂಡುಬಂದರೆ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು ಎಂದು ಯುನೆಸ್ಕೋ ಎಚ್ಚರಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *