ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ – ಸುಳಿವು ಕೊಟ್ಟ ಸಂಜಯ್ ರಾವತ್

Public TV
1 Min Read
Sanjay Raut

ಮುಂಬೈ: ಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆ ಕುರಿತಂತೆ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡುವ ಮೂಲಕ ಹೊಸ ತಿರುವನ್ನು ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿ ಸರ್ಕಾರಕ್ಕೆ ಸಂಕಟ ಬಂದಿದೆ. ಈ ಹಿನ್ನೆಲೆ ನಿನ್ನೆಯಿಂದ ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಸಂಜಯ್ ರಾವತ್ ಟ್ವೀಟ್ ಮಾಡಿದ್ದು, ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣೆಗೆಗಳ ಪಯಣ ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಶಾಸಕಾಂಗ ಸಭೆಯನ್ನು ವಿಸರ್ಜನೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರದ ರಾಜ್ಯಪಾಲ, ಸಿಎಂಗೆ ಕೊರೊನಾ

ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಏಕನಾಥ್ ಶಿಂಧೆ ಅವರೊಂದಿಗಿರುವ ಮಾತುಕತೆ ನಡೆಸಲಾಗುತ್ತಿದೆ. ಎಲ್ಲರೂ ಶಿವಸೇನೆಯಲ್ಲಿಯೇ ಇರುತ್ತಾರೆ. ನಮ್ಮ ಪಕ್ಷ ಸತತ ಹೋರಾಟ ಮಾಡುತ್ತೆ. ಹೆಚ್ಚೆಂದರೆ ಅಧಿಕಾರ ಕಳೆದುಕೊಳ್ಳಬಹುದು ಆದರೆ ಹೋರಾಟ ಮುಂದುವರಿಸುತ್ತೇವೆ ಎಂದಿದ್ದರು.

Bhagat Singh Koshyari and tuddhav thackeray

ಈ ಮಧ್ಯೆ ರಾಜ್ಯಪಾಲ ಭಗತ್ ಸಿಂಗ್ ಮತ್ತು ಸಿಎಂ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಮಹಾರಾಷ್ಟ್ರ ಸರ್ಕಾರ ಮುಂದುವರೆಯುತ್ತಾ? ಪತನಗೊಳ್ಳುತ್ತಾ ಎಂಬ ಪ್ರಶ್ನೆಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ಇಬ್ಭಾಗದತ್ತ ಶಿವಸೇನೆ – ಮಹಾರಾಷ್ಟ್ರದಲ್ಲಿ ಮುಂದೇನಾಗಬಹುದು? ಅಂಕಿ ಸಂಖ್ಯೆ ಲೆಕ್ಕಾಚಾರ ಏನು?

Live Tv

Share This Article
Leave a Comment

Leave a Reply

Your email address will not be published. Required fields are marked *