ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್

Public TV
1 Min Read
j and k pak

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಭದ್ರತಾ ಪಡೆ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ)ನ ಪಾಕಿಸ್ತಾನಿ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದು, ಮೂವರನ್ನು ಬಂಧಿಸಿದೆ.

FotoJet 5 8

ಕಾಶ್ಮೀರ ವಲಯದ ಪೊಲೀಸರು ಟ್ವಿಟ್ಟರ್‌ನಲ್ಲಿ, ಎನ್‍ಕೌಂಟರ್‌ನಲ್ಲಿ ಹಂತನಾದ ಭಯೋತ್ಪಾದಕನನ್ನು ಪಾಕಿಸ್ತಾನಿಯವನು ಗುರುತಿಸಲಾಗಿದೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‍ಇಟಿಯೊಂದಿಗೆ ಸಂಪರ್ಕ ಹೊಂದಿದ್ದ. ಬಂಧಿತ ಭಯೋತ್ಪಾದಕರ ಜೊತೆಗೆ ಇನ್ನೂ 2 ರಿಂದ 3 ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಕುಪ್ವಾರದ ಲೋಲಾಬ್ ಪ್ರದೇಶದಲ್ಲಿ ಅಡಗಿರುವ ಬಂಧಿತ ಉಗ್ರಗಾಮಿ ಶೋಕೆಟ್ ಅಹ್ಮದ್ ಶೇಖ್ ಬಗ್ಗೆ ಕುಪ್ವಾರ ಪೊಲೀಸರ ಸೇನೆಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಇವರು 28ಆರ್‌ಆರ್‌ನೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

jk crpf jawan martyred 2 critical as terrorists attack patrol party 1593582871

ಭದ್ರತಾ ಪಡೆ, ಉಗ್ರಗಾಮಿಗಳು ಅಡಗಿಕೊಂಡಿದ್ದ ಜಾಗವನ್ನು ಶೋಧಿಸಿದ್ದಾರೆ. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭ ಮಾಡಿದ್ದು, ನಮ್ಮ ತಂಡವು ಪ್ರತಿದಾಳಿ ನಡೆಸಿದೆ. ಇದರಲ್ಲಿ ಒಬ್ಬ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ಹೇಳಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *