ಟೀ ಕುಡಿಯೋದನ್ನು ದಯವಿಟ್ಟು ಕಮ್ಮಿ ಮಾಡಿ – ಪಾಕ್ ಪ್ರಜೆಗಳಿಗೆ ಮನವಿ

Public TV
1 Min Read
tea 1

ಇಸ್ಲಾಮಾಬಾದ್: ಲಂಕಾ ಬಳಿಕ ಇದೀಗ ಪಾಕಿಸ್ತಾನ ಕೂಡ ದಿವಾಳಿ ಅಂಚು ತಲುಪಿದೆ. ದೇಶದ ಆಮದು ವೆಚ್ಚ ಕಡಿಮೆ ಮಾಡಲು ಪಾಕಿಸ್ತಾನ ತನ್ನ ಜನರಲ್ಲಿ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದೆ.

ಟೀ ಸೊಪ್ಪನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದ್ದು, ಇದೀಗ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯದಿರಲು ಟೀ ಸೇವನೆ ಕಡಿಮೆ ಮಾಡಿ ಎಂದು ಪಾಕ್ ಸರ್ಕಾರ, ಜನರಲ್ಲಿ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಒಟ್ಟು 648 ಕೇಸ್ – 4 ಸಾವಿರದ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣ

does tea count as fluid 1440x810 1

ಕಳೆದ ವರ್ಷ ಪಾಕಿಸ್ತಾನ 5,000 ಕೋಟಿ ರೂ.ಗೂ ಅಧಿಕ ಮೌಲ್ಯದ ಟೀ ಸೊಪ್ಪನ್ನು ಆಮದು ಮಾಡಿಕೊಂಡಿತ್ತು. ಜನರು ಟೀ ಕುಡಿಯುವುದನ್ನು ಕಡಿಮೆ ಮಾಡಿದರೆ, ಆಮದು ಖರ್ಚು ಕಡಿಮೆ ಆಗಲಿದೆ ಎಂದು ಪಾಕಿಸ್ತಾನದ ಯೋಜನಾ ಸಚಿವ ಆಶ್‌ಸಾನ್ ಇಕ್ಬಾಲ್ ಹೇಳಿದ್ದಾರೆ.

ನಾವು ಸಾಲ ಮಾಡಿ ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪ್ರತಿ ದಿನ ಚಹಾ ಕುಡಿಯುವುದನ್ನು 1-2 ಲೋಟದಷ್ಟು ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಇಕ್ಬಾಲ್ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಪಾಕ್ ಪ್ರಜೆಗೆಳು ಸಿಟ್ಟಾಗಿದ್ದಾರೆ. ಇದನ್ನೂ ಓದಿ: ಹಿಂದಿ ಭಾಷೆ ಬರುವ ಶಾಲಾ, ಕಾಲೇಜು ಮಕ್ಕಳಿಗಷ್ಟೇ ಪ್ರವಾಸ ಭಾಗ್ಯ- ಶಿಕ್ಷಣ ಇಲಾಖೆ ಆದೇಶ

TEA

ಕಳೆದ ವಾರ ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಸರ್ಕಾರ ಮಾರುಕಟ್ಟೆಗಳನ್ನು ರಾತ್ರಿ 8:30 ರ ಒಳಗಾಗಿ ಮುಚ್ಚುವಂತೆ ಸಲಹೆ ನೀಡಿತ್ತು. ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾತ್ರಿ 10 ಗಂಟೆ ಬಳಿಕ ಎಲ್ಲಾ ರೀತಿಯ ಮದುವೆ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ತಿಳಿಸಿತ್ತು. ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ಸಬ್ಸಿಡಿ ರದ್ದು ಮಾಡಲು ಪಾಕಿಸ್ತಾನ ಚಿಂತನೆ ನಡೆಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *