ಮೋದಿಗೆ ನಾಯಿ ಸಾವು ಬರುತ್ತೆ- ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕನ ವಿರುದ್ಧ FIR

Public TV
1 Min Read
Congress leader Sheikh Hussain

ಮುಂಬೈ: ನಾಗ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಶೇಖ್ ಹುಸೇನ್ ವಿರುದ್ಧ ಬಿಜೆಪಿ ಗಿಟ್ಟಿಖಾಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಈ ಸಂಬಂಧ ಹುಸೇನ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಹಾಗೂ 48 ಗಂಟೆಗಳಲ್ಲಿ ಬಂಧಿಸುವಂತೆ ಒತ್ತಾಯಿಸಿದ್ದು, ವಿಫಲವಾದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

bjP

ಮಂಗಳವಾರ ಕೇಂದ್ರ ತನಿಖಾ ಸಂಸ್ಥೆಯು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ನಾಗ್ಪುರದ ಇಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಶೇಖ್ ಹುಸೇನ್ ಮತ್ತು ಮಾಜಿ ನಗರಾಧ್ಯಕ್ಷರು ಭಾಗವಹಿಸಿದ್ದರು. ಇದನ್ನೂ ಓದಿ: 1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿವೆ, ಹೇಳಲು ನನಗೆ ನಾಚಿಕೆಯಾಗ್ತಿದೆ: ಹೊರಟ್ಟಿ

ಈ ವೇಳೆ ಶೇಕ್ ಹುಸೇನ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ. ಜೊತೆಗೆ ನರೇಂದ್ರ ಮೋದಿಗೂ ನಾಯಿಯ ಸಾವು ಬರುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ಅಶ್ವಥ ಎಲೆಯಲ್ಲಿ ಮೂಡಿದ ಮಾಸ್ಟರ್ ಬ್ಲಾಸ್ಟರ್ – ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ ಉಡುಪಿಯ ಮಹೇಶ್

Share This Article
Leave a Comment

Leave a Reply

Your email address will not be published. Required fields are marked *