ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ

Public TV
1 Min Read
tamil nadu

ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಜನಪ್ರಿಯ ದೇವಸ್ಥಾನದ ಬೃಹತ್ ರಥ ಸೋಮವಾರ ಉರುಳಿಬಿದ್ದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತ ದುರ್ದೈವಿಯನ್ನು ಸಿ. ಮನೋಹರನ್ (57) ಮತ್ತು ಜಿ. ಸರವಣನ್ (50) ಎಂದು ಗುರುತಿಸಲಾಗಿದೆ. ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ 30 ಅಡಿ ಅಲಂಕೃತ ರಥವನ್ನು ದೇವಾಲಯದ ಸುತ್ತಮುತ್ತಲಿನ ಪ್ರಮುಖ ಬೀದಿಗಳಲ್ಲಿ ಎಳೆಯುವ ವೇಳೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

POLICE JEEP

ರಥ ಕೆಳಗುರುಳಿ ಬಿದ್ದಾಗ ರಥದ ಚಕ್ರದಡಿ ಸಿಲುಕಿದ ಇಬ್ಬರನ್ನು ರಕ್ಷಿಸಲು ಮೆರವಣಿಗೆ ವೀಕ್ಷಿಸುತ್ತಿದ್ದವರು ತಕ್ಷಣ ಧಾವಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಥವನ್ನು ಎಳೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರಥದ ಚಕ್ರವು ಕೆಳಗುರುಳಿ ಬಿದ್ದಿದ್ದು, ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಘಟನೆಯಲ್ಲಿ ಗಾಯಗೊಂಡ ಮೂವರನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಜ್ಜಾ ಉದ್ಯೋಗಿಯನ್ನು ಮನಬಂದಂತೆ ಥಳಿಸಿದ ನಾಲ್ವರು ಯುವತಿಯರ ಗುಂಪು

ಇದೀಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಘಟನೆಯಲ್ಲಿ ಸಾವನ್ನಪ್ಪಿರುವವವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *