ದೊಡ್ಡ ಸಮುದಾಯಕ್ಕೆ ನೋವಾಗುತ್ತಿದೆ, ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ: ಅಖಿಲೇಶ್ ಯಾದವ್

Public TV
2 Min Read
akilesh yadav

ಲಕ್ನೋ: ಬಿಜೆಪಿಯು ತನ್ನ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ಸೂಚನೆಗಳ ಮೇರೆಗೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದಸ್ಯರ ಮಾತಿನಿಂದ ದೊಡ್ಡ ಸಮುದಾಯಕ್ಕೆ ನೋವಾಗಿದ್ದು, ರಾಜ್ಯವನ್ನು ಧ್ವಂಸಗೊಳಿಸುತ್ತಿರುವ ಭಯಾನಕ ಅಶಾಂತಿ ಘಟನೆಗಳ ಹಿಂದೆ ಇದೇ ರಾಜಕೀಯವಿದೆ. ಈ ದುರದೃಷ್ಟಕರ ವಿವಾದವನ್ನು ಪರಿಹರಿಸಲು ಬಿಜೆಪಿ ಸರ್ಕಾರವು ಯಾವುದೇ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

yogi adityanath 1

ನಮ್ಮ ಸಂಸ್ಕೃತಿ, ಧರ್ಮ ಮತ್ತು ಸಂವಿಧಾನವು ಯಾವುದೇ ಶಾಸನಬದ್ಧ ನಿಬಂಧನೆಗಳಿಲ್ಲದೆ ಯಾರೊಬ್ಬರ ಮನೆ ಅಥವಾ ಅಂಗಡಿಯನ್ನು ಧ್ವಂಸ ಮಾಡಲು ಅಥವಾ ಅಮಾಯಕರನ್ನು ಬಂಧಿಸಲು ಅವಕಾಶವಿಲ್ಲ. ಆದರೆ ಈ ಶಾಂತಿಯುತ ಪ್ರತಿಭಟನೆ ನಡೆಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದು, ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶ ಇಡೀ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೂಪುರ್ ವಿರುದ್ಧ ಪ್ರತಿಭಟಿಸಿದವರು ಕುವೈತ್‍ನಿಂದ ಗಡಿಪಾರು – ನಮ್ಮಲ್ಲಿ ಕಠಿಣ ಕ್ರಮ ಯಾವಾಗ ಎಂದ ನೆಟ್ಟಿಗರು?

ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಇದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾಬೀತಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ವೈಫಲ್ಯವನ್ನು ಮರೆಮಾಚಲು ಮುಖ್ಯಮಂತ್ರಿಗಳು ಸುಳ್ಳು ಕಥೆಗಳನ್ನು ಹೆಣೆದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

nupur sharma 3 1

ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದ ಹೇಳಿಕೆಗಳ ವಿರುದ್ಧ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆಗಳಿಂದ ತತ್ತರಿಸಿದೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಇಂಟರ್‌ನೆಟ್ ಸ್ಥಗಿತ, 70 ಮಂದಿ ಅರೆಸ್ಟ್

ಜೂನ್ 3 ರಂದು ಕಾನ್ಪುರದಲ್ಲಿ ಅಂತಹ ಮೊದಲ ಪ್ರಮುಖ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮಾರುಕಟ್ಟೆಗಳನ್ನು ಮುಚ್ಚಲು ಪ್ರಯತ್ನಿಸಿದರು. ಪೆಟ್ರೋಲ್ ಬಾಂಬ್‍ಗಳು ಮತ್ತು ಕಲ್ಲುಗಳನ್ನು ಎಸೆದು ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದ್ದಾರೆ.

download 59

ಕಳೆದ ಶುಕ್ರವಾರದಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಈವರೆಗೆ 13 ಎಫ್‍ಐಆರ್‌ಗಳನ್ನು ದಾಖಲಿಸಿಕೊಂಡು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 316 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರ ಮಧ್ಯೆ ಅಧಿಕಾರಿಗಳು ಆರೋಪಿಗಳು ಅವರ ಸಂಬಂಧಿಕರು ಅಥವಾ ಸಹಚರರಿಗೆ ಸೇರಿದ ಅನೇಕ ಕಟ್ಟಡಗಳನ್ನು ಧ್ವಂಸ ಮಾಡಲು ಸೂಚಿಸಲಾಗಿತ್ತು. ರಾಜ್ಯವು ಸಹರಾನ್‍ಪುರ, ಪ್ರಯಾಗ್‍ರಾಜ್ ಮತ್ತು ಕಾನ್ಪುರ್ ಜಿಲ್ಲೆಯಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *