ಭಿಕ್ಷುಕ ಮಕ್ಕಳಿಗಾಗಿ ವಿಶೇಷ ಪುನರ್ವಸತಿ ಕಾರ್ಯಕ್ರಮ ಆರಂಭಿಸಿದ ಯೋಗಿ ಸರ್ಕಾರ

Public TV
1 Min Read
Yogi Adityanath

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಬಾಲಭಿಕ್ಷುಕರಿಗಾಗಿ ವಿಶೇಷ ಪುನರ್ವಸತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಇದರ ಅಡಿಯಲ್ಲಿ ಮಕ್ಕಳನ್ನು ಶಿಕ್ಷಣ ಪಡೆಯಲು ಪ್ರೋತ್ಸಾಹಿಸಲಾಗುತ್ತದೆ. ಅವರ ಪೋಷಕರಿಗೆ ಸರ್ಕಾರವು ಉದ್ಯೋಗವನ್ನು ನೀಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ರಾಜ್ಯವು ಭಿಕ್ಷುಕ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ.

download 54

ಈ ಹಿನ್ನೆಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವಿಶೇಷ್ ಗುಪ್ತಾ ಮಾತನಾಡಿ, ಜಿಲ್ಲೆಗಳಾದ್ಯಂತ ಬಾಲಭಿಕ್ಷುಕರನ್ನು ಗುರುತಿಸಿ ಅವರಿಗಾಗಿ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇದರ ಅಡಿಯಲ್ಲಿ, ನಾವು ಮಕ್ಕಳನ್ನು ಶಾಲೆಗೆ ಮರಳಲು ಪ್ರೋತ್ಸಾಹಿಸುತ್ತೇವೆ. ಆದರೆ ಯುಪಿ ಸರ್ಕಾರವು ಅವರ ಪೋಷಕರಿಗೆ ಉದ್ಯೋಗವನ್ನು ನೀಡುತ್ತದೆ. ಇದರಿಂದ ಕುಟುಂಬಗಳಿಗೆ ಆದಾಯದ ಮೂಲವಿದೆ ಮತ್ತು ಮಕ್ಕಳು ಭಿಕ್ಷೆ ಬೇಡಬೇಕಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

download 55

ಇದಲ್ಲದೆ, ಮಕ್ಕಳನ್ನು ಭಿಕ್ಷಾಟನೆಗೆ ಒತ್ತಾಯಿಸುವ ವ್ಯಕ್ತಿಗಳೇನಾದರೂ ನಮಗೆ ಸಿಕ್ಕಿದ್ದೇ ಆದಲ್ಲಿ, ಭವಿಷ್ಯದಲ್ಲಿ ಈ ಅಪರಾಧದಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಭಿಕ್ಷಾಟನೆಗೆ ಒತ್ತಾಯಿಸುವವರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಕ್ರಾಸಿಂಗ್‍ಗಳು, ಮಾಲ್‍ಗಳು, ಮಾರುಕಟ್ಟೆಗಳು ಮತ್ತು ದೇವಸ್ಥಾನಗಳಂತಹ ಸ್ಥಳಗಳ ಮೇಲೆ ನಿಗಾ ಇಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ಮತ್ತು ಎನ್‍ಜಿಒಗಳು ಕೆಲಸ ಮಾಡುತ್ತವೆ. ಪ್ರತಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪುನರ್ವಸತಿ ನಿಧಿಯನ್ನೂ ಸ್ಥಾಪಿಸಲಾಗುವುದು. ಮಕ್ಕಳನ್ನು ಶಿಕ್ಷಣದತ್ತ ಸೆಳೆಯಲು ಮಕ್ಕಳನ್ನು ಶಾಲೆಗೆ ಕರೆ ತರಲು ಬಾಲಶ್ರಮಿಕ ವಿದ್ಯಾ ಯೋಜನೆ ಆರಂಭಿಸಲಾಗಿದ್ದು, ಕಡಿಮೆ ಆದಾಯದ ಕುಟುಂಬಗಳ ಮಕ್ಕಳು ಮಿಷನ್ ಶಕ್ತಿ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *