ಚಿಕ್ಕಮಗಳೂರು: ಅಕ್ರಮ ಗೋಮಾಂಸ ಶೆಡ್ ಮೇಲೆ ಜೆಸಿಬಿ ದಾಳಿ ಮಾಡಿರುವ ಘಟನೆ ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.
ನಗರಸಭೆ ಇಂದು ಎಂದಿನಂತೆ ತಮಿಳು ಕಾಲೋನಿ ಹಾಗೂ ಷರೀಫ್ ಗಲ್ಲಿಯಲ್ಲಿ ಅಲ್ಲಲ್ಲೇ ಬೆಳೆದಿದ್ದ ಗಿಡ-ಘಂಟೆಗಳ ತೆರವಿಗೆ ಮುಂದಾಗಿತ್ತು. ಆಗ ತಮಿಳು ಕಾಲೋನಿಯ ಜನನಿಬಿಡ ಪ್ರದೇಶದಲ್ಲಿದ್ದ ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಗೋಮಾಂಸವೂ ಅಲ್ಲಿ ಇತ್ತು ಎಂದು ಹೇಳಲಾಗಿದೆ. ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗೋಮಾಂಸ ಮಳಿಗೆಯನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್
ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡುತ್ತಿದ್ದಂತೆ ಗೋಮಾಂಸದ ಶೆಡ್‌ನಲ್ಲಿದ್ದ ಮೂವರು ನಾಪತ್ತೆಯಾಗಿದ್ದಾರೆ. ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬೀಳುತ್ತಿದ್ದಂತೆ ಆ ಕಟ್ಟಡವನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳನ್ನು ಕಂಡು ಓಡಿ ಹೋದ ಅಕ್ರಮ ಗೋಮಾಂಸ ಶೆಡ್‍ನಲ್ಲಿದ್ದ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್



