ಕೊನೆಯ ಓವರ್‌ನಲ್ಲಿ ಕ್ರೀಸ್ ಬಿಟ್ಟು ಕೊಡದ ಪಾಂಡ್ಯ ನಡೆಗೆ ಟೀಕೆ

Public TV
1 Min Read
IND VS SA T 20 Series

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ದಿನೇಶ್ ಕಾರ್ತಿಕ್ ಅವರಿಗೆ ಕ್ರೀಸ್ ಬಿಟ್ಟು ಕೊಡದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

ಆ್ಯನ್ರಿಚ್ ನಾಟ್ರ್ಜೆ ಎಸೆದ 20ನೇ ಓವರ್‌ನ ಮೊದಲ ಮೊದಲ ಎಸೆತದಲ್ಲಿ ರಿಷಭ್ ಪಂತ್ ಕ್ಯಾಚ್ ಔಟ್ ಆಗಿದ್ದರು. ಸ್ಟ್ರೈಕ್‍ಗೆ ಬಂದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿ ಯಾವುದೇ ರನ್ ತೆಗೆಯಲಿಲ್ಲ. ಮೂರನೇ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ರನ್ ಓಡಿದರು. ನಾಲ್ಕನೇಯ ಎಸೆತದಲ್ಲಿ ಪಾಂಡ್ಯ ಸಿಕ್ಸರ್ ಸಿಡಿಸಿದರು.

ಐದನೇ ಎಸೆತವನ್ನು ಪಾಂಡ್ಯ ಮಿಡ್ ವಿಕೆಟ್‍ಗೆ ತಳ್ಳಿದರು. ಆದರೆ ಪಾಂಡ್ಯ ಯಾವುದೇ ರನ್ ಓಡಲಿಲ್ಲ. ಪಾಂಡ್ಯ ಅವರ ಈ ನಡೆಗೆ ಈಗ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಂತಿಮ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಆಟವಾಡಿ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

ದೆಹಲಿಯಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ-20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಟೀಂ ಇಂಡಿಯಾ ಸೋತಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‍ಗಳ ನಷ್ಟಕ್ಕೆ 211 ರನ್ ಗಳಿಸಿ 212 ರನ್‍ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್‌ನಲ್ಲೇ 3 ವಿಕೆಟ್‍ಗಳ ನಷ್ಟಕ್ಕೆ 212 ರನ್‍ಗಳಿಸಿ ಗೆಲುವು ದಾಖಲಿಸಿತು.

Share This Article
Leave a Comment

Leave a Reply

Your email address will not be published. Required fields are marked *