ನಟ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರ್ ಸ್ವಾಮಿ ಪುತ್ರ ಆವ್ಯನ್ ದೇವ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿದ್ದಾರೆ. ತಮ್ಮ ಮಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರ ಸ್ವಾಮಿ ಈವರೆಗೂ ಹಾಕಿದ್ದರೂ, ಮುಖ ತೋರಿಸಿರಲಿಲ್ಲ. ಅಲ್ಲದೇ, ಮಾಧ್ಯಮಗಳ ಕ್ಯಾಮೆರಾಗೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಗನನ್ನು ಕೂರಿಸಿದ್ದಾರೆ ನಿಖಿಲ್.
ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯಿತು. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣ ಗಣನೆ
ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಷೇಕ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನಡೆದಿದ್ದು, ದೊಡ್ಡ ಗೌಡರ ಕುಟುಂಬವು ಮೊಮ್ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಟ್ಟಿದ್ದಾರೆ. ನಿಖಿಲ್ ಮತ್ತು ರೇವತಿ ದಂಪತಿಯ ಈ ಮಗುವಿಗೆ ಈಗ ಒಂಬತ್ತು ತಿಂಗಳು. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ
ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆದಿದೆ.