ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ

Public TV
2 Min Read
siddaramaiah

ಮೈಸೂರು: ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಬಿಎಸ್‍ವೈ ಸಿದ್ದು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿಎಂ ಇಬ್ರಾಹಿಂ ಆರೋಪಿಸಿದ್ದರು. ಈ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ. ಅವನು ಜೆಡಿಎಸ್‍ನಲ್ಲಿ ಕ್ಯಾಪ್ಟೀವ್ ಪ್ರೆಸಿಡೆಂಟ್ ಇದ್ದಂತೆ. ಕುಳಿತುಕೋ ಎಂದರೆ ಕುಳಿತುಕೊಳ್ಳಬೇಕು. ನಿಂತುಕೋ ಅಂದರೆ ನಿಂತುಕೊಳ್ಳಬೇಕು. ಎಂಎಲ್‍ಸಿ ಮಾಡುತ್ತೇವೆ ಅಂತ ಹೇಳಿ ಕರೆದುಕೊಂಡು ಹೋದರು. ಎಂಎಲ್‍ಸಿ ಮಾಡಿದ್ದಾರಾ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಲೇವಡಿ ಮಾಡಿದ್ದಾರೆ.

CM IBRAHIM

ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಆತ್ಮಸಾಕ್ಷಿಯ ಮತಗಳು ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದೇ ಬರುತ್ತದೆ. ಜೆಡಿಎಸ್‍ಗೆ ಈಗಲೂ ಬಿಜೆಪಿ ಗೆಲ್ಲಬಾರದು ಎಂಬ ಇಚ್ಛೆ ಇದ್ದರೆ ಅವರ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡಿಸಲಿ. ನಾವು ಅನೇಕ ಬಾರಿ ಜೆಡಿಎಸ್‍ಗೆ ನೆರವಾಗಿಲ್ಲವಾ? ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ಲವಾ? ಮೂವತ್ತೇಳು ಸ್ಥಾನ ಇದ್ದ ಜೆಡಿಎಸ್‍ಗೆ ನಾವು ಸಿಎಂ ಸ್ಥಾನ ಕೊಡಲಿಲ್ಲವಾ? ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್‍ಗೆ ಸಹಕಾರ ಕೊಟ್ಟಿದ್ದೇವೆ. ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನು ಓದಿ :  ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್

HDD

ಪಠ್ಯಪುಸ್ತಕ ವಿವಾದ: ಪರಿಷ್ಕರಣೆಯನ್ನೇ ರದ್ದು ಮಾಡಿ, ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕರಣೆಯೇ ಜಾರಿಯಾಗಲಿ. ಹಿಂದೂಗಳ ಭಾವನೆಗೆ ಧಕ್ಕೆಯಾಗುವ ಕೆಲಸ ಮಾಡಿದ್ದಾರೆ. ಕವಿಗಳ, ಮಹಾತ್ಮರ ಕೃತಿಚೌರ್ಯ ನಡೆದಿವೆ. ನಾನು ಹಿಂದೂ ಅಲ್ಲವಾ? ಅಂಬೇಡ್ಕರ್ ಹಿಂದೂ ಅಲ್ಲವಾ? ಎಲ್ಲರಿಗೂ ಅವಮಾನ ಆಗಿದೆ ಎಂದಿದ್ದಾರೆ. ಇದನ್ನು ಓದಿ : ಸಲ್ಮಾನ್ ಖಾನ್ ಜೊತೆ ತಂದೆಯನ್ನೂ ಕೊಲ್ಲುವ ಬೆದರಿಕೆ : ಎಫ್.ಐ.ಆರ್ ದಾಖಲು, ಹೆಚ್ಚಿದ ಭದ್ರತೆ

ಇದೇ ವೇಳೆ ಆರ್ಥಿಕತೆಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಏನು ಗೊತ್ತಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ, ಹೌದು ನಾನು ಆರ್ಥಿಕ ತಜ್ಞ ಅಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡಿರುವ ವಕೀಲ. ಹೈಕೋರ್ಟ್ ಸುಪ್ರೀಂಕೋರ್ಟ್‍ನಲ್ಲೂ ಪ್ರಾಕ್ಟಿಸ್ ಮಾಡಿಲ್ಲ. ನಾನು ಆರ್ಥಿಕತೆ ಬಗ್ಗೆ ಮಾತನಾಡಿರುವುದು ತಪ್ಪು, ಸರಿ ಎಂದು ಹೇಳಲು ಪ್ರತಾಪ್ ಸಿಂಹ ಆರ್ಥಿಕ ತಜ್ಞನಾ? ಯಡಿಯೂರಪ್ಪ, ಬೊಮ್ಮಾಯಿ ಆರ್ಥಿಕ ತಜ್ಞರೇ? ನಾನು ಓದಿರುವ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ? ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ? ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಮೀ ಹೆದ್ದಾರಿ ಬರುತ್ತದೆ? ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆ ಚರ್ಚೆಗೆ ಬರಲಿ. ಈ ಚರ್ಚೆಗೆ ನಾನು ಬರುವುದಿಲ್ಲ, ನಮ್ಮ ಪಕ್ಷದ ವಕ್ತಾರರನ್ನು ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ. ಮೈಸೂರು ವಿಮಾನ ಉನ್ನತೀಕರಣ ಯಾರ ಕಾಲದಲ್ಲಿ ಆಗಿದ್ದು, ಆ ಪ್ರತಾಪ್ ಸಿಂಹನಿಗೆ ಏನು ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *