ಚಂಡೀಗಢ: ಖಾಲಿಸ್ತಾನ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಿದ್ದು, ಇಂದು ಪಂಜಾಬ್‍ನ ಅಮೃತಸರದಲ್ಲಿರುವ ಸಿಖ್‍ರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‍ನ ಪ್ರವೇಶದ್ವಾರದಲ್ಲಿ ಜನರ ಗುಂಪು ಭಿಂದ್ರನ್‍ವಾಲೆ ಪರ ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ.
38ನೇ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು. ನಂತರ ಶಾಂತಿಯನ್ನು ಕಾಪಾಡಲು ಪೊಲೀಸರಿಗೆ ಸೂಚಿಸಿದ್ದರು.
#WATCH | Punjab: A group of people gathers at the entrance to the Golden Temple in Amritsar, raises pro-Khalistan slogans and carries posters of Khalistani separatist Jarnail Bhindranwale. pic.twitter.com/zTu9ro7934
— ANI (@ANI) June 6, 2022
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗೋಲ್ಡನ್ ಟೆಂಪಲ್ ಸುತ್ತಲೂ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ದೇವಸ್ಥಾನಕ್ಕೆ ಯಾವುದೇ ರೀತಿಯ ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿತ್ತು. ಆದರೆ ಬೆಳಗಿನ ಪ್ರಾರ್ಥನಾ ಸಭೆಯ ನಂತರ ನೂರಕ್ಕೂ ಹೆಚ್ಚು ಜನರು ಹೊರಗೆ ಜಮಾಯಿಸಿ ಘೋಷಣೆ ಕೂಗಿದ್ದಾರೆ.
ಏನಿದು ಆಪರೇಷನ್ ಬ್ಲೂಸ್ಟಾರ್: ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರಕ್ಕಾಗಿ ಬಂಡುಕೋರರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‍ವಾಲೆ, ಗೋಲ್ಡನ್‍ಟೆಂಪಲ್ (ಸ್ವರ್ಣಮಂದಿರ)ನ್ನೆ ಆಶ್ರಯ ತಾಣವಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಭಿಂದ್ರನ್‍ವಾಲೆಯನ್ನು ಸ್ವರ್ಣಮಂದಿರದಿಂದ ಹೊರಹಾಕಲು ಭಾರತೀಯ ಸೇನೆಯು 1984ರ ಜೂನ್ 3ರಿಂದ 8ರವರೆಗೆ ಆಪರೇಷನ್ ಬ್ಲೂಸ್ಟಾರ್ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿತ್ತು. ಆಗಿನ ಪ್ರಧಾನಿ ಇಂದಿರಾಗಾಂಧಿ ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಇದರಲ್ಲಿ ಭಿಂದ್ರನ್‍ವಾಲೆ ಹತನಾಗಿದ್ದ. ಇದರ ನೆನಪಿಗಾಗಿ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಇದನ್ನೂ ಓದಿ: RSSಗೆ ಕೈ ಹಾಕಿದ ನೆಹರೂ, ಇಂದಿರಾ ಗಾಂಧಿ ಸುಟ್ಟೋಗಿದ್ದಾರೆ, ಸಿದ್ದರಾಮಯ್ಯನೂ ಸುಟ್ಟು ಹೋಗ್ತಾರೆ: ಕಟೀಲ್
ಖಾಲಿಸ್ತಾನ ಕೂಗು ಹೆಚ್ಚಳ: ವರ್ಷದ ಮಾರ್ಚ್‍ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್ ರಾಜ್ಯದಲ್ಲಿ ಬಹುಮತದಿಂದ ಸರ್ಕಾರವನ್ನು ರಚಿಸಿತ್ತು. ಆದರೆ ಸರ್ಕಾರ ರಚನೆ ಆದಗಿನಿಂದಲೂ ರಾಜ್ಯಕ್ಕೆ ಆಪತ್ತು ತರುವಂತಹ ಒಂದೆಲ್ಲಾ ಒಂದು ಘಟನೆಗಳು ಆಗುತ್ತಲೇ ಇವೆ. ಇದರ ಜೊತೆಗೆ ಖಾಲಿಸ್ತಾನ್ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಮೊಹಾಲಿಯಲ್ಲಿರುವ ರಾಜ್ಯ ಪೊಲೀಸ್‍ನ ಗುಪ್ತಚರ ವಿಭಾಗದ ಪ್ರಧಾನ ಕಚೇರಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆದಿತ್ತು. ಇದನ್ನೂ ಓದಿ: ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ
ಇದಾದ ಬಳಿಕ ಆಪ್ ಸರ್ಕಾರ ತೀವ್ರ ಟೀಕೆ ಗುರಿಯಾಗಿತ್ತು. ಇದಾದ ಬಳಿಕ ಸರ್ಕಾರ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನವೇ ಪಂಜಾಬಿ ಗಾಯಕ ಸಿಧು ಮೂಸೆ ವಾಲೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭಗವಂತ್ ಮಾನ್ ಅವರು ಪಂಜಾಬ್‍ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಖಾಲಿಸ್ತಾನ್ ಬೆಂಬಲಿಗರು ರಾಜ್ಯದಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಹೆಚ್ಚುತ್ತಿದೆ.