ಶಿವಮೊಗ್ಗ: ಕೆಳದಿ ಅರಸನಾಗಿದ್ದ ವೆಂಕಟಪ್ಪ ನಾಯಕರ ಪ್ರೇಯಸಿ ಚಂಪಕ ಎಂಬುವರ ಸವಿನೆನಪಿಗಾಗಿ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಿರ್ಮಿಸಿದ್ದ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ಕಲ್ಯಾಣಿಗೆ ಚಂಪಕ ಸರಸ್ಸು ಕಲ್ಯಾಣಿ ಅಥವಾ ಕೊಳ ಅಂತಾ ಸಹ ಕರೆಯಲಾಗುತ್ತದೆ.
ಈ ಸುಂದರ ಕಲ್ಯಾಣಿ ಇಂದು ನಶಿಸಿ ಹೋಗುವಂತಹ ಹಂತ ತಲುಪಿತ್ತು. ಆದರೆ ಈ ಸುಂದರ ಕಲ್ಯಾಣಿಯನ್ನು ನಟ ಯಶ್ ನಡೆಸುತ್ತಿರುವ ಯಶೋಮಾರ್ಗ ತಂಡ ಅಭಿವೃದ್ಧಿಪಡಿಸಿದೆ. ಕಲ್ಯಾಣಿಯನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣಿ ಸುತ್ತ ಕಲ್ಲಿನಲ್ಲಿ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಕಲ್ಯಾಣಿಯ ಮಧ್ಯದಲ್ಲಿ ಶಿವನ ಸಣ್ಣ ಮಂದಿರ ಸಹ ಇದೆ. ಮಂದಿರಕ್ಕೆ ತೆರಳಲು ಕಲ್ಲಿನ ದಾರಿ ಇದೆ. ಕಲ್ಯಾಣಿಯ ಪ್ರವೇಶದಲ್ಲಿ ಕಲ್ಲಿನ ಆನೆಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ
ಇಂತಹ ಸುಂದರ ಕಲ್ಯಾಣಿಯನ್ನು, ಯಶೋ ಮಾರ್ಗ ತಂಡ ಹಾಗು ಹೈದರಾಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೀರ್ಣೋದ್ಧಾರಗೊಂಡ ಚಂಪಕ ಸರಸ್ಸು ಕಲ್ಯಾಣಿಯನ್ನು ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ
ರಾಜ್ಯದ ಕೆರೆಗಳ ಅಭಿವೃದ್ಧಿ ಕುರಿತು ಯಶ್ ಅವರ ಜೊತೆ ಚರ್ಚೆ ಮಾಡುವಾಗ ಚಂಪಕ ಸರಸ್ಸು ಕಲ್ಯಾಣಿ ಬಗ್ಗೆ ಚರ್ಚೆ ಮಾಡಿದ್ದೇವು. ರಾಜ್ಯದ ಜೀವ ಸೆಲೆ ಉಳಿಯಬೇಕು ಎಂಬ ಉದ್ದೇಶದಿಂದ ಯಶ್ ಅವರು, ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ಧಿಪಡಿಸಿರುವುದು ಖುಷಿಯ ವಿಚಾರ ಎಂದರು.