ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ: ಡಿಕೆಶಿ

Public TV
2 Min Read
dk shivakumar

ಬೆಂಗಳೂರು: ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮ್ಮ ಭಾರತ ನಿಂತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ, ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ. ನಮ್ಮ ಸಂವಿಧಾನದಲ್ಲಿ ಎಲ್ಲ ಹಕ್ಕು ನೀಡಿರುವ ಅಂಬೇಡ್ಕರ್ ಅವರು ಒಬ್ಬ ಶ್ರೇಷ್ಠ ನಾಯಕ. ಇಡೀ ದೇಶ ಕಳೆದ 75 ವರ್ಷದಿಂದ ಅದನ್ನು ಒಪ್ಪಿದ್ದೇವೆ. 6ನೇ ತರಗತಿಯಲ್ಲಿ ಚನ್ನಣ್ಣ ವಾಲೇಕಾರ್ ಅವರು ಅಂಬೇಡ್ಕರ್ ಬಗ್ಗೆ ಬರೆದ ನೀ ಹೋದ ಮರುದಿನ ಎಂಬ ಕವಿತೆ ತೆಗೆದಿದ್ದಾರೆ. 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಮಾಜ ಸುಧಾಕರ ಬಗ್ಗೆ ಇದೆ. ಅದರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯಿದೆ. ಈ ಹಿಂದೆ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿ, ಹುಟ್ಟಿದ ಸ್ಥಳ, ದಿನಾಂಕ ಹೆಸರುಗಳಿದ್ದವು. ಅಂಬೇಡ್ಕರ್ ಬೃಹತ್ ಹೋರಾಟಗಳನ್ನು ತೆಗೆದುಹಾಕಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಎಂಬುದನ್ನೇ ತೆಗೆದುಹಾಕಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರ ನೋಡಿಲ್ಲ. ನಾನು ರೋಹಿತ್ ಚಕ್ರತೀರ್ಥ ಬಗ್ಗೆ ಮಾತಾಡುವುದರಲ್ಲಿ ಅರ್ಥ ಇಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ಎಂದು ಗುಡುಗಿದ್ದಾರೆ.

ambedkar 1 1

ರಾಜ್ಯಸಭೆಯಲ್ಲಿ ಆತ್ಮಸಾಕ್ಷಿಯ ಮತಗಳು ಪಕ್ಷದ ಅಭ್ಯರ್ಥಿಗೆ ಬೀಳಲಿವೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೆ, ಆತ್ಮ ಸಾಕ್ಷಿಯ ಮತಗಳು ಪಕ್ಷಕ್ಕೆ ಬರಲಿವೆ. ಯಾರು ಜಾತ್ಯಾತೀತತೆ ಮೇಲೆ ನಂಬಿಕೆ ಇಟ್ಟಿದ್ದಾರೋ ಅವರು ಮತ ಹಾಕುತ್ತಾರೆ. ಯಾರ‍್ಯಾರು ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಬೀದಿಯಲ್ಲಿ ನಿಂತು ಸೀರೆ ಉಡಲಿ ಅಂತ ಕೆಲವರು ಏನೇನೋ ಮಾತನಾಡಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಎಲ್ಲ ಹಿರಿಯ ನಾಯಕರ ಸಹಮತ ಇದೆ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಎಲ್ಲರೂ ಸೇರಿಯೇ ತೀರ್ಮಾನ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಜೂನ್ 10ರ ತನಕ ಕಾಯಿರಿ, ಎಲ್ಲ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

Siddaramaiah

ಕುವೆಂಪು ಅವರು ಇರಬಹುದು, ಭಗವದ್ಗೀತೆ ಇರಬಹುದು, ಜೈನ ಸಮುದಾಯ ಇರಬಹುದು, ನಾರಾಯಣ್ ಗುರು ಸೇರಿದಂತೆ ಎಲ್ಲರನ್ನು ಗೌರವದಿಂದ ನಾವು ಕಾಣುತ್ತೇವೆ. ಅದನ್ನು ತಿರುಚಿ, ಸಾಮಾನ್ಯರ ವರ್ಗಕ್ಕೆ ಸೇರಿಸಿದ್ದಾರೆ. ಎಸ್‍ಟಿ ಸಮುದಾಯದ ಸರ್ಕಾರ ಬೆನ್ನೆಲುಬಾಗಿ ನಿಂತಿದ್ದೇವೆ, ಬೇಕಾದಷ್ಟು ಕಾನೂನು ತಂದಿದ್ದೇವೆ. ಅವರೇನು ದಡ್ಡರಾ.. ಕಾಡಿನಲ್ಲಿ ಜೀವನ ಮಾಡಿಕೊಂಡು, ನಮಗೆ ರಕ್ಷಣೆ ಕೊಟ್ಟಿದ್ದಾರೆ. ಪಾಳೆಗಾರಿಗೆ ಮಾಡಿದ್ದಾರೆ, ಹೋರಾಟ ಮಾಡಿದವರು ಇದ್ದಾರೆ. ರಾಜ್ಯವನ್ನು ಆಳಿದವರು ಇದ್ದಾರೆ. ರಾಮಯಾಣ ಬರೆದ ವಾಲ್ಮೀಕಿ ಸಮುದಾಯವನ್ನು ತುಚ್ಛವಾಗಿ ನೋಡುವುದು ನಮ್ಮ ಮನಸ್ಸಿಗೆ ನೋವು ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವಿಶ್ವಪರಿಸರ ದಿನ- ರಾಜಭವನದಲ್ಲಿ ರುದ್ರಾಕ್ಷಿ ಸಸಿ ನೆಟ್ಟ ರಾಜ್ಯಪಾಲರು

DK Shivakumar Bangalore Bhagavad Gita

ಸಿಎಂ ಅವರ ಪತ್ರಿಕಾ ಹೇಳಿಕೆ ದ್ವಂದ್ವವಾಗಿದೆ. ಡಬಲ್ ಸ್ಟ್ಯಾಂಡರ್ಡ್ ಆಗಿದೆ. ಸಮಿತಿ ಕ್ಲೋಸ್ ಆದ ಮೇಲೆ, ಎಲ್ಲವೂ ಕೂಡ ಕ್ಲೋಸ್ ಆಗಬೇಕಲ್ಲ? ಬಸವಣ್ಣ ಹಾಗೂ ಕೆಂಪೇಗೌಡರ ಬಗ್ಗೆ ದ್ವನಿ ಎತ್ತಿದ್ದಕ್ಕೆ ಎಲ್ಲಾ ಶ್ರೀಗಳನ್ನು ನಾನು ಅಭಿನಂದಿಸುತ್ತೇನೆ. ಸಾಹಿತಿಗಳು, ಬರಹಗಾರರು ಧಿಕ್ಕಾರ ಕೂಗಿದ್ದಕ್ಕೆ ನಾನು ಅಭಿನಂದಿಸುತ್ತೇನೆ. ನಾವು ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *