ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

Public TV
2 Min Read
rape

ಹೈದರಾಬಾದ್: ಮರ್ಸಿಡಿಸ್ ಕಾರಿನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಚಾರವೆಸಗಿರುವ ಘಟನೆ ಮೇ 28 ರಂದು ಹೈದರಾಬಾದ್‍ನಲ್ಲಿ ನಡೆದಿತ್ತು. ಘಟನೆಯಲ್ಲಿ ಶಾಸಕರೊಬ್ಬರ ಪುತ್ರನ ಕೈವಾಡವಿದ್ದು, ಪ್ರಕರಣದ ಐವರು ಆರೋಪಿಗಳು ಅಪ್ರಾಪ್ತರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

police (1)

ಎಫ್‍ಐಆರ್‌ನ ಪ್ರಕಾರ, ಆರೋಪಿಯು ತನ್ನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆಯ ಕುತ್ತಿಗೆಗೆ ಗಾಯಗಳನ್ನು ಕೂಡ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಇದೀಗ ಪ್ರಕರಣವನ್ನು ಬದಲಾಯಿಸಿ ಐಪಿಸಿಯ ಸೆಕ್ಷನ್ 376 (ಸಾಮೂಹಿಕ ಅತ್ಯಾಚಾರ) ಎಂದು ಸೇರಿಸಿದ್ದಾರೆ. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

ಶಾಸಕರ ಪುತ್ರ ಮತ್ತು ಅಲ್ಪಸಂಖ್ಯಾತ ಮಂಡಳಿಯ ಅಧ್ಯಕ್ಷರು ಪಾರ್ಟಿಯಲ್ಲಿ ಬಾಲಕಿಯ ಜೊತೆಗಿದ್ದರು. ಅದರಲ್ಲಿ ಒಬ್ಬ ಅಪ್ರಾಪ್ತ ಆರೋಪಿಯನ್ನು ಮಾತ್ರ ಗುರುತಿಸಲು ಮತ್ತು ಹೆಸರಿಸಲು ಸಾಧ್ಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

pocso

ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ದೌರ್ಜನ್ಯ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆಯು ಇನ್ನೂ ಪ್ರಗತಿಯಲ್ಲಿದೆ.

ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಅಪರಾಧದ ಐವರು ಅಪರಾಧಿಗಳಲ್ಲಿ ಒಬ್ಬ ವ್ಯಕ್ತಿ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಶಾಸಕರ ಮಗನಾಗಿದ್ದು, ಮತ್ತೋರ್ವ ಅಲ್ಪಸಂಖ್ಯಾತ ಅಧ್ಯಕ್ಷರ ಮಗ ಎಂದು ಆರೋಪಿಸಲಾಗಿದೆ ಎಂದು ತೆಲಂಗಾಣ ಬಿಜೆಪಿ ಹೇಳಿದೆ.

ಸಂತ್ರಸ್ತೆಯ ಪೋಷಕರು ಕ್ರಿಮಿನಲ್ ದೂರು ನೀಡಿದ್ದರೂ ಹೈದರಾಬಾದ್ ಪೊಲೀಸರು ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ನಿಧಾನಗತಿಯ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

web bjp logo 1538503012658

ಈ ಪ್ರಕರಣದಲ್ಲಿ ಬಂಧಿಸಲು ಪೊಲೀಸರು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಅಥವಾ ಸಿಎಂ ಕೆಸಿಆರ್ ಅವರ ಅನುಮತಿಗಾಗಿ ಕಾಯುತ್ತಿದ್ದಾರೆಯೇ ಎಂದು ನಾವು ಆಶ್ಚರ್ಯ ಪಡುತ್ತಿದ್ದೇವೆ. ಹಗಲು ಹೊತ್ತಿನಲ್ಲಿ ಹ್ಯಾಕಿಂಗ್‍ಗಳು, ಅಂತರ ಧರ್ಮೀಯ ಕೊಲೆಗಳು ಮತ್ತು ಅತ್ಯಾಚಾರಗಳಂತಹ ಭಯಾನಕ ಅಪರಾಧಗಳ ಸರಣಿಗಳು ತೆಲಂಗಾಣವನ್ನು ಕಳಪೆ ಬೆಳಕಿನತ್ತ ಪ್ರದರ್ಶಿಸುತ್ತಿವೆ. ರಾಜ್ಯದಲ್ಲಿ ಕಾನೂನಿನ ಭಯ ತಳಮಟ್ಟದಲ್ಲಿ ಕಂಡುಬರುತ್ತಿದೆ ಎಂದು ತೆಲಂಗಾಣ ಬಿಜೆಪಿಯ ಮುಖ್ಯ ವಕ್ತಾರ ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.

ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *