ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

Public TV
1 Min Read
Sathya Ummathal 2

ನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ, ನಟರೂ ಆಗಿರುವ ಸತ್ಯ ಉಮ್ಮತ್ತಾಲ್ (70) ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಯೋಗರಾಜ್ ಭಟ್ ಅವರ ಪತ್ನಿಯ ತಂದೆ ಇವರಾಗಿದ್ದು, ಭಟ್ಟರ ಬೆಂಗಳೂರಿನ ಮನೆಯಲ್ಲೇ ವಾಸವಿದ್ದರು.

Sathya Ummathal 4

ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯ ಅವರು ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹನಟರಾಗಿ ನಟಿಸಿದ್ದಾರೆ. ಲೈಫ್ ಇಷ್ಟೇನೆ ಪಾತ್ರದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ಗಣೇಶ್, ದುನಿಯಾ ವಿಜಯ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.  ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

Sathya Ummathal 3

ಯೋಗರಾಜ್ ಭಟ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲೂ ಸತ್ಯ ಕಾಣಿಸಿಕೊಂಡಿದ್ದರು. ಜಯಮ್ಮನ ಮಗ, ಕೆಂಡಸಂಪಗಿ, ಕಡ್ಡಿಪುಡಿ, ದನಕಾಯೋನು, ಆಕ್ಟ್ 1978, ಪ್ರೀತಿ ಗೀತಿ ಇತ್ಯಾದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

Sathya Ummathal 1

ಬೆಂಗಳೂರಿನ ಯೋಗರಾಜ್ ಭಟ್ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಬೆಂಗಳೂರಿನ ರುದ್ರಭೂಮಿಯಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *