ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?

Public TV
2 Min Read
Anantaraju

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ. ಈ ಕೇಸ್‌ನಲ್ಲಿ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಇನ್ನು ಅನಂತರಾಜು ಸ್ನೇಹಿತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ತಿದೆ. ಇದು ನಿಜಕ್ಕೂ ಆತ್ಮಹತ್ಯೆಯೋ..? ಪ್ರಚೋದನೆಯೋ..? ಎನ್ನುವ ಕುರಿತು ಪ್ರಕರಣದ ತನಿಖೆ ನಡೀತಾ ಇದೆ. ಆದ್ರೆ ತನಿಖೆ ಮಾಡಬೇಕಾದ ಪೊಲೀಸ್ರು ಪ್ರಭಾವಕ್ಕೆ ಒಳಗಾದಂತೆ ಕಾಣ್ತಿದೆ. ಯಾಕಂದ್ರೆ ಪ್ರಕರಣದಲ್ಲಿ ಜೈಲು ಪಾಲಾಗಿ ಬೇಲ್ ಮೇಲೆ ಹೊರಗೆ ಬಂದಿರೋ ಅನಂತರಾಜು ಸ್ನೇಹಿತೆ ರೇಖಾ ಕೆಲವೊಂದು ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಗಂಗಾ ನದಿಯಲ್ಲಿ ಮೀನಿನ ವೈವಿಧ್ಯತೆ ಶೇ.36 ರಷ್ಟು ಹೆಚ್ಚಳ

02

ಅನಂತರಾಜುಗೆ ಪತ್ನಿ ಟಾರ್ಚರ್ ಇತ್ತು ಅಂತ ರೇಖಾ ಆರೋಪಿದ್ದಾರೆ. ಈ ಬಗ್ಗೆ ಆಡಿಯೋಗಳನ್ನ ಪೊಲೀಸ್ರಿಗೆ ಕೊಟ್ಟೆ. ಆದ್ರೆ ಸಾಕ್ಷಿ ಕೊಟ್ಟರೂ ಸಹ ಪೊಲೀಸರು ನನ್ನನ್ನೇ ಜೈಲಿಗೆ ಕಳಿಸಿದ್ರು. ಇದರಿಂದ ಮನನೊಂದು ಜೈಲಲ್ಲಿ ನಾನೂ ಆತ್ಮಹತ್ಯೆಗೆ ಯತ್ನಿಸಿದೆ. ನಾನು ಹನಿಟ್ರ್ಯಾಪ್‌ ಮಾಡಿದ್ರೆ ಶೂಟೌಟ್ ಮಾಡಿಕೊಳ್ತೇನೆ ಅಂತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

ಗೃಹಬಂಧನದಲ್ಲಿದ್ರಾ ಅನಂತ ರಾಜು?: 45 ದಿನಗಳ ಕಾಲ ಅನಂತರಾಜು ನನ್ನ ಪತ್ನಿ ಸುಮಾ ಗೃಹ ಬಂಧನದಲ್ಲಿರಿಸಿದ್ದರಂತೆ. ಈ ಹಿಂದೆಯೇ ಅನಂತರಾಜು ಆತ್ಮಹತ್ಯೆಗೆ ಯತ್ನಿಸಿ ಜಿಎಮ್ ಆಸ್ಪತ್ರೆಗೆ ಸೇರಿಸಿದ್ದರು. ಆಗಲೇ ಡೆತ್ ನೋಟ್ ಬರೆಸಿಟ್ಟುಕೊಂಡಿದ್ರು ಅಂತ ರೇಖಾ ಟ್ವಿಸ್ಟ್ ಕೊಟ್ಟಿದ್ದಾರೆ. 45 ದಿನಗಳ ಕಾಲ ಅನಂತನನ್ನು ಗೃಹ ಬಂಧನದಲ್ಲಿರಿಸಿದ್ರು. ಬಟ್ಟೆ ಕೊಡದೇ ಇದ್ದಿದ್ದರಿಂದ ಹೊರಗೆ ಬಂದಿರಲಿಲ್ಲ. ಈ ಹಿಂದೆಯೇ ಅನಂತ್ ನಿದ್ರೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿ ಜಿಎಮ್ ಆಸ್ಪತ್ರೆಗೆ ಸೇರಿಸಿದ್ದರು. ಆಗ ಡೆತ್ ನೋಟ್ ಬರೆಸಿಟ್ಟುಕೊಂಡಿದ್ದರು. ಹನಿಟ್ರ್ಯಾಪ್‌ ಮಾಡೋದಾಗಿದ್ರೆ 6 ವರ್ಷ ಸಂಬಂಧದಲ್ಲಿ ಇರಬೇಕಾಗಿರಲಿಲ್ಲ. ನನ್ನ ಮಗಳಿಗೆ ಮೆಡಿಕಲ್ ಮಾಡಿಸೊ ಭರವಸೆ ಒಂದನ್ನ ಕೊಟ್ಟಿದ್ರು ಅಷ್ಟೆ. ನಾನು ಹನಿಟ್ರಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ ಪಬ್ಲಿಕ್ ಟಿವಿಯೊಂದಿಗೆ ಹೇಳಿಕೊಂಡಿದ್ದಾರೆ.

ananth

ಈ ಮಧ್ಯೆ ಸುಮಾ-ರೇಖಾ ನಡುವಿನ ಸಂಭಾಷಣೆ ತನಿಖೆಗೆ ಮತ್ತೊಂದು ಆಯಾಮ ಕೊಟ್ಟಿದೆ. ಡೆತ್‌ನೋಟ್ ಇಟ್ಟುಕೊಂಡು ರೇಖಾಗೆ ಅನಂತರಾಜು ಪತ್ನಿ ಸುಮಾ ಧಮ್ಕಿ ಹಾಕಿರುವ ಆಡಿಯೋ ಲಭ್ಯ ಆಗಿದೆ. ಅದ್ಯಾಕೊ ಗೊತ್ತಿಲ್ಲ ಬ್ಯಾಡರಹಳ್ಳಿ ಪೊಲೀಸ್ರು ಈ ಕೇಸಲ್ಲಿ ಎಲ್ಲವನ್ನೂ ಮರೆಮಾಚುವ ಕೆಲಸ ಮಾಡ್ತಿದ್ದಾರೆ. ಅನಂತ್‌ರಾಜ್ ಸಾವು ಆತ್ಮಹತ್ಯೆಯೋ..? ಪ್ರಚೋದನೆಯೋ..? ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯ ಬಯಲಿಗೆಳೆಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *