– ಚಕ್ರತೀರ್ಥ ಮೇಲೆ ನಾಳೆ ಕ್ರಮ ಆಗುತ್ತಾ?
ಬೆಂಗಳೂರು: ಪಠ್ಯ ಪರಿಷ್ಕರಣೆ ವಿಚಾರವಾಗಿ ದಿನಕ್ಕೊಂದು ವಿವಾದ ಭುಗಿಲೇಳುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡ ಎದುರಿಸುತ್ತಿರುವಂತೆ ಕಾಣುತ್ತಿದೆ. ಅದ್ರಲ್ಲೂ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಲೆದಂಡಕ್ಕೆ ದಿನೇ ದಿನೇ ಆಗ್ರಹ ಹೆಚ್ಚುತ್ತಿದೆ.
ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಕುವೆಂಪುರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಆದಿಚುಂಚನಗಿರಿ ಶ್ರೀಗಳ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದೂ ಫಲ ಕೊಟ್ಟಂತೆ ಕಾಣುತ್ತಿಲ್ಲ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಹಳ ಜನ ಸ್ನೇಹಿತರಿದ್ದಾರೆ- ರಾಜಕೀಯ ದಾಳ ಉರುಳಿಸಿದ ಸಿಎಂ
ನಿನ್ನೆ ಸಚಿವ ಬಿ.ಸಿ.ನಾಗೇಶ್ ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟಿದ್ರು. ಇಂದು ಪಠ್ಯಪುಸ್ತಕ ನಿರ್ದೇಶನಾಲಯದ ನಿರ್ದೇಶಕ ಮಾದೇಗೌಡ ನೇತೃತ್ವದ ತಂಡ ಶ್ರೀಗಳನ್ನು ಭೇಟಿ ಮಾಡಿ ಕುವೆಂಪು ಪಠ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಬಸವಣ್ಣಗೆ ಪಠ್ಯದಲ್ಲಿ ಅಪಮಾನ ಮಾಡಲಾಗಿದೆ. ಲಿಂಗಾಯತ ಧರ್ಮದ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಕೂಡಲೇ ಇದನ್ನೆಲ್ಲಾ ಹಿಂಪಡೆದು, ಹಳೆಯ ಪಠ್ಯ ಮುಂದುವರೆಸಬೇಕು. ಇಲ್ಲ ಅಂದ್ರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಣೆಹಳ್ಳಿ ಶ್ರೀಗಳು ಪತ್ರ ಬರೆದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೂಡಲಸಂಗಮ ಶ್ರೀಗಳು ಕೂಡ, ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಇರೋದನ್ನು ನೋಡಿ ಎದೆಗೆ ಕಲ್ಲು ಹೊಡೆದಂಗೆ ಆಗಿದೆ. ಕುವೆಂಪು, ಬಸವಣ್ಣ ತತ್ವಗಳಿಗೆ ಅಪಚಾರ ಎಸಗಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರದ್ದು ಮಾಡುವಂತೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಿವಾದ ರಹಿತ ವ್ಯಕ್ತಿಗಳಿಗೆ ಸಮಿತಿಯಲ್ಲಿ ಜಾಗ ಕೊಡ್ಬೇಕು ಎಂದಿದ್ದಾರೆ. ಈ ಬೆನ್ನಲ್ಲೇ ಮಾತನಾಡಿದ ಸಿಎಂ, ಸಮಿತಿಯಿಂದ ರೋಹಿತ್ ಚಕ್ರತೀರ್ಥ ಸದಸ್ಯತ್ವ ವಜಾ ಬಗ್ಗೆ ನಾಳೆ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ
ಸಾಣೆಹಳ್ಳಿ ಸ್ವಾಮೀಜಿಗಳೊಂದಿಗೆ ಮಾತನಾಡಿ ಗೊಂದಲ ಬಗೆಹರಿಸೋದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕುವೆಂಪು ಬಗ್ಗೆ ಅಪಮಾನ ಮಾಡಲಾಗಿದೆ ಅನ್ನೋ ಆರೋಪಕ್ಕೆ ರೋಹಿತ್ ಚಕ್ರತೀರ್ಥರಿಂದ ಸ್ಪಷ್ಟೀಕರಣ ನೀಡಿದ್ದು, ಕುವೆಂಪು ಅವರಿಗೆ ಅಪಮಾನ ಮಾಡಿಲ್ಲ ಎಂದಿದ್ದಾರೆ. 2017ರಲ್ಲಿ ವಾಟ್ಸಪ್ ಮೂಲಕ ಬಂದ ನಾಡಗೀತೆ ಧಾಟಿಯ ನಾಲ್ಕು ಸಾಲುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ ಅಷ್ಟೇ. ಆದ್ರೆ, ಇದನ್ನು ಕೆಲವರು ತಮಗೆ ಬೇಕಾದಂತೆ ತಿರುಚಿದ್ದಾರೆ. ಪೊಲೀಸ್ ಇಲಾಖೆ ಕೂಡ ಪ್ರಕರಣ ಕೈಬಿಟ್ಟಿದೆ. ಹಳೆಯ ಪ್ರಕರಣವನ್ನು ಮತ್ತೆ ಕೆದಕಿ ವಿವಾದವಾಗಿಸಿದ್ದು ವಿಷಾದನೀಯ ಎಂದಿದ್ದಾರೆ.
ಮೈಸೂರು ರಾಜವಂಶ ಯದುವೀರ್ ಮಾತ್ರ, ಲೆಫ್ಟು ಬೇಡ, ರೈಟೂ ಬೇಡ. ಇತಿಹಾಸವನ್ನು ಇತಿಹಾಸವಾಗಿಯೇ ಭೋದಿಸಿ ಎಂದು ಸಲಹೆ ನೀಡಿದ್ದಾರೆ.