ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

Public TV
1 Min Read
SRILANKA

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ಕೊರತೆಯೊಂದಿಗೂ ಹೋರಾಡುತ್ತಿದೆ. ಇದೀಗ ನಾಗರಿಕರಿಗೆ ಸಹಾಯ ಮಾಡಲು ಶ್ರೀಲಂಕಾದ ಮುಖ್ಯ ಬಂದರು ಪ್ರದೇಶದಲ್ಲಿ ಉಚಿತ ಬೈಸಿಕಲ್ ಸೇವೆಯನ್ನು ಅನಾವರಣಗೊಳಿಸಲಾಗಿದೆ.

ಶ್ರೀಲಂಕಾದಲ್ಲಿ ನಗದು ಕೊರತೆಯಿರುವ ಕಾರಣ ಇತರ ದೇಶಗಳಿಂದ ತೈಲವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಇಂಧನ ಚಾಲಿತ ವಾಹನಗಳನ್ನೂ ಜನರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಇದೀಗ ದ್ವೀಪ ರಾಷ್ಟ್ರ ಇಂಧನದ ಅವಶ್ಯಕತೆ ಇಲ್ಲದ ಸೈಕಲ್‌ಗಳನ್ನು ಜನರಿಗೆ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

sri lanka

ಡಾಲರ್ ಕೊರತೆಯಿರುವ ಕಾರಣ ಶ್ರೀಲಂಕಾದಲ್ಲಿ ಇಂಧನ ಹಾಗೂ ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ವಾಹನ ಚಾಲಕರು ಗ್ಯಾಸ್ ಸ್ಟೇಶನ್‌ಗಳಲ್ಲಿ ಪಡಿತರ ಇಂಧನ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಇದೀಗ ಶ್ರೀಲಂಕಾ ಇಂಧನವನ್ನು ಉಳಿಸುವ ಸಲುವಾಗಿ ಜನರಿಗೆ ಸೈಕಲ್ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

ಬಂದರಿನ ಕಡೆ ಬರುವ ಜನರಿಗೆ ಸದ್ಯ ಬಳಕೆಯಾಗದೇ ಇರುವ ರೈಲು ಮಾರ್ಗಗಳನ್ನು ಸೈಕಲ್ ಟ್ರ್ಯಾಕ್ ಆಗಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಬಂದರು, ಹಡಗು ಹಾಗೂ ಕಡಲ ತೀರದ ಜನನಿಬಿಡ ವ್ಯಾಪಾರ ಮಾರ್ಗಗಳಲ್ಲಿ ಜನರಿಗೆ ಹಾಗೂ ಮುಖ್ಯವಾಗಿ ಕಾರ್ಮಿಕರಿಗೆ ಸಾಯವಾಗುವಂತೆ 100 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧ್ಯಕ್ಷ ಪ್ರಶಾಂತ್ ಜಯಮಣ್ಣ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *