ಬೆಂಗಳೂರು: ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯಲ್ಲಿ ಮಲ್ಟಿ ವ್ಹೀಲ್ ವೆಹಿಕಲ್ ಹೊರತುಪಡಿಸಿ(ಎಂವಿವಿ) ಬಸ್, ಲಾರಿ ಓಡಾಟಕ್ಕೆ 20 ದಿನದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
ಫ್ಲೈ ಓವರ್ ಭಾರ ತಡೆಯುವ ಸಾಮರ್ಥ್ಯದ ಸಾಮರ್ಥ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ(ಎನ್‌ಎಚ್‌ಎಐ) ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ತಜ್ಞರು ವರದಿ ನೀಡಿದ್ದಾರೆ.
ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಎನ್‌ಎಚ್ಎಐ ಉನ್ನತ ಅಧಿಕಾರಿಗಳ ತಂಡ ತ್ರಿಸದಸ್ಯ ಸಮಿತಿ ರಚಿಸಿದ್ದು ಸಾಧಕ ಬಾಧಕವನ್ನ ಪರಿಶೀಲಿಸಿ ಮತ್ತೊಂದು ವರದಿ ನೀಡುವಂತೆ ಕೋರಿದೆ.
ಐಐಎಸ್‌ಸಿಯ ತಜ್ಞ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಮಹೇಶ್ ಟೆಂಡನ್, ದೆಹಲಿ ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ನಿವೃತ್ತ ಇಂಜಿನಿಯರ್ ಡಾ. ಶರ್ಮಾ ನೇತೃತ್ವದ ತ್ರಿಸದಸ್ಯ ಸಮಿತಿ ಜೂನ್ ಮೊದಲ ವಾರದಲ್ಲಿ ಎನ್‌ಎಚ್‌ಎಐಗೆ ಶಿಫಾರಸು ಇರುವ ವರದಿ ಸಲ್ಲಿಸಲಿದೆ. ಈ ವರದಿಯನ್ನು ಎನ್‌ಎಚ್‌ಎಐ ಒಪ್ಪುವ ಸಾಧ್ಯತೆಯಿದೆ. ಇದನ್ನೂ ಓದಿ: ನಾವೆಲ್ಲಾ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ- ಬಿಜೆಪಿ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು
ಜೂನ್ 15 ರ ವರದಿ ಸಲ್ಲಿಕೆಯ ಬಳಿಕ ನಂತರ ಬಸ್ , ಲಾರಿ ಗಳ ಓಡಾಟಕ್ಕೆ ಅವಕಾಶ ಸಿಗಲಿದೆ. ಆದರೆ ಫ್ಲೈಓವರ್‌ನಲ್ಲಿ ಅತ್ಯಂತ ಭಾರದ ವಾಹನ(ಎಂವಿವಿ) ಸಂಚಾರ ನಿರ್ಬಂಧ ಮುಂದುವರೆಯಲಿದೆ.
ಮೇಲ್ಸೇತುವೆ ಸಾಮರ್ಥ್ಯದ ಬಗ್ಗೆ ವಿಸ್ತೃತ ಪರಿಶೀಲನೆಗೆ 6 ರಿಂದ 9 ತಿಂಗಳು ಬೇಕಾಗುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಟ್ರಕ್ ಸೇರಿದಂತೆ ಘನ ವಾಹನಗಳಿಗೆ ನಿರ್ಬಂಧ ಮುಂದುವರೆಯಲಿದೆ.
ಭಾರಿ ವಾಹನಗಳ ಓಡಾಟದಿಂದ 7 ತಿಂಗಳ ಹಿಂದೆ 102, ಮತ್ತು 103 ಪಿಲ್ಲರ್ ನಡುವೆ ಕೇಬಲ್ ಬಾಗಿತ್ತು. ಹೀಗಾಗಿ ಈ ಫ್ಲೈ ಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಳಿಕ ಕೆಲ ತಿಂಗಳ ಬಳಿಕ ಕೇಬಲ್ ಸರಿಪಡಿಸಿ ತಜ್ಞರ ವರದಿ ಬಳಿಕ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.