ಯತ್ನಾಳ್‍ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಹಣ ಕೇಳಿದ್ರು: ರೇಣುಕಾಚಾರ್ಯ ಬಾಂಬ್

Public TV
2 Min Read
RENUKACHARAYA

ದಾವಣಗೆರೆ: ಬಸನಗೌಡ ಯತ್ನಾಳ್‍ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್‌ಗಳು ಹಣ ಕೇಳಿದ್ರು ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

BASANAGOWDA PATIL YATHNAL 1

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನನಗೂ ಕೂಡ ಹಲವು ಬ್ರೋಕರ್ಸ್‍ಗಳು ಬಂದು ಹಣ ನೀಡಿ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು. ನನಗೆ ಅವರು ಗೊತ್ತು ಇವರು ಗೊತ್ತು ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನ ಮಾರಟಕ್ಕೆ ಇಲ್ಲ ಎಂದು ಹೇಳಿ ಛೀಮಾರಿ ಹಾಕಿ ಕಳುಹಿಸಿದ್ದೆ ಕಾಂಗ್ರೆಸ್‍ನಲ್ಲಿ ಹಣ ಕೊಟ್ಟು ಬಿ ಪಾರ್ಮ್, ಸಚಿವ ಸ್ಥಾನ ಖರೀದಿ ಮಾಡುತ್ತಾರೆ. ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಅವಕಾಶ ಇಲ್ಲ ಎಂದರು. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಪಕ್ಷ ಬೆಳೆಸುತ್ತದೆ, ಮಧ್ಯವರ್ತಿಗಳು ಬಂದು ಕೇಳಿದ್ದಾರೆ. ಅವರನ್ನು ಒದ್ದು ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದೆ. ಜೈಲಿಗೆ ಹೋದ ಯುವರಾಜ್ ಸ್ವಾಮಿ ನನ್ನ ಧರ್ಮಪತ್ನಿಗೆ ಕಾಲ್ ಮಾಡಿ ನಿಮ್ಮ ಮನೆಯವರಿಗೆ ಸಚಿವ ಸ್ಥಾನ ಎಂದು ಹೇಳಿದ್ದ. ಮೋದಿ, ಅಮಿತ್ ಶಾ ಜೊತೆ ಪೋಟೋ ಹೊಡೆಸಿಕೊಳ್ಳುವುದು ನನಗೆ ಎಲ್ಲರೂ ಗೊತ್ತು ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿ ಅಲ್ಲದವರು ಈ ರೀತಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

RENUKACXHARAYA
ಆರ್‌ಎಸ್‌ಎಸ್ ನಪುಂಸಕ‌ ಸಂಘಟನೆ ಎಂದು ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಆರ್‌ಎಸ್‌ಎಸ್‌ನ್ನು ನಪುಂಸಕರು ಎಂದು ಹೇಳ್ತಾರೋ ಅವರೇ ನಪುಂಸಕರು. ಆರ್‌ಎಸ್‌ಎಸ್‌ನವರು ಭಾರತ್ ಮಾತಾಕಿ ಜೈ ಅಂತಾರೆ. ಆದರೆ ಕಾಂಗ್ರೆಸ್‍ನವರು ಭಯೋತ್ಪಾದರನ್ನು, ಉಗ್ರಗಾಮಿಗಳನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ. ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ ಅವರು ರಾಷ್ಟ್ರ ಪ್ರೇಮಿಗಳೋ ಇಲ್ಲ, ಬಿಜೆಪಿ ಆರ್‌ಎಸ್‌ಎಸ್ ರಾಷ್ಟ್ರ ಪ್ರೇಮಿಗಳೋ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಹಿಜಬ್ ಸಂಘರ್ಷಕ್ಕೆ ಕಾರಣ ಕಾಂಗ್ರೆಸ್, ಕೋರ್ಟ್ ತೀರ್ಪು ನೀಡಿದರೂ ರಾಜ್ಯ ಬಂದ್‍ಗೆ ಕರೆ ಕೊಡ್ತಾರೆ. ಮತಾಂದ ಟಿಪ್ಪು ಜಯಂತಿ ಆಚರಣೆ ಮಾಡಿ ಐದಾರು ಹಿಂದೂಗಳ ಹತ್ಯೆ ಆಯ್ತು, ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆಯ್ತು ಇದಕ್ಕೆಲ್ಲ ಕಾರಣ ಕಾಂಗ್ರೆಸ್. ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕ ಹಕ್ಕಿಲ್ಲ. ಗೋವು ತಾಯಿ ಸಮಾನ, ಅಂತಹ ಗೋವುಗಳನ್ನು ಕಡಿಯುವವರಿಗೆ ಬೆಂಬಲ ನೀಡಿದ ಇವರು ದೇಶದ್ರೋಹಿಗಳು. ಇದನ್ನೂ ಓದಿ: ಕೊಡಗಿನಲ್ಲಿ ವಿವಾದ ಎಬ್ಬಿಸಿದ ಬುರ್ಖಾ ಡ್ಯಾನ್ಸ್

ಆರ್‌ಎಸ್‌ಎಸ್‌ನ್ನು ಯಾರು ಟೀಕೆ ಮಾಡ್ತಾರೋ ಅವರು ದೇಶದ್ರೋಹಿಗಳು. ಯಡಿಯೂರಪ್ಪನವರು ಎಲ್ಲಿ ಇದ್ರು ಹುಲಿನೇ ಎಂದು ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪನವರ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಪಕ್ಷ ಮುನ್ನಡೆಯುತ್ತದೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಈ ರೀತಿ ಪಕ್ಷದ ವಿರುದ್ಧ ಮಾತನಾಡುವುದು ಸರಿಯಲ್ಲ. ಏನೇ ಇದ್ದರೂ ಪಕ್ಷದ ನಾಲ್ಕು ಗೋಡೆ ನಡುವೆ ಮಾತನಾಡಬೇಕು. ಹಿಂದೆ ಕೂಡ ಯತ್ನಾಳ್ ಪಕ್ಷದ ವಿರುದ್ಧ ಮಾತನಾಡಿಲ್ಲ. 2,500 ಕೋಟಿ ನೀಡಿದರೆ ಸಿಎಂ ಸ್ಥಾನ ಸಿಗುತ್ತೆ ಎಂದು ಬ್ರೋಕರ್ಸ್‍ಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ ಅಷ್ಟೇ ಎಂದರು.

Share This Article
Leave a Comment

Leave a Reply

Your email address will not be published. Required fields are marked *