4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

Public TV
1 Min Read
nepal plane

ಕಠ್ಮಂಡು: ನೇಪಾಳದ ಖಾಸಗಿ ವಿಮಾನ ಸಂಸ್ಥೆ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನ ಭಾನುವಾರ ನಾಪತ್ತೆಯಾಗಿದೆ. ವಿಮಾನದಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಒಟ್ಟು 22 ಪ್ರಯಾಣಿಕರಿದ್ದರು ಎಂದು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕ ಕಡಿತಗೊಂಡ ವಿಮಾನ ತಾರಾ ಏರ್ 9 ಎನ್‌ಎಇಟಿ ಅವಳಿ ಎಂಜಿನ್ ವಿಮಾನವು ಪ್ರವಾಸಿ ನಗರವಾದ ಪೋಖರಾದಿಂದ ಜೋಮ್ಸಮ್‌ನೆಡೆಗೆ ತೆರಳುತ್ತಿತ್ತು. ಬೆಳಗ್ಗೆ ಸುಮಾರು 9:55ರ ವೇಳೆ ಟೇಕ್‌ಆಫ್ ಆದ ವಿಮಾನ ಸ್ವಲ್ಪ ಸಮಯದಲ್ಲೇ ಸಂಪರ್ಕ ಕಡಿತಗೊಂಡಿತು ಎಂದು ವರದಿಯಾಗಿದೆ. ಇದನ್ನೂ ಓದಿ:  ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥ

plane 2

ವಿಮಾನ ಮುಸ್ತಾಂಗ್ ಜಿಲ್ಲೆಯ ಜೋಮ್ಸಮ್‌ನಲ್ಲಿ ಆಕಾಶದಲ್ಲಿ ಕಾಣಿಸಿಕೊಂಡು, ಬಳಿಕ ಮೌಂಟ್ ಧೌಲಗಿರಿಗೆ ತಿರುಗಿದೆ. ಬಳಿಕ ಅದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮುಖ್ಯ ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಮೂವರು ಜಪಾನ್ ಪ್ರಜೆಗಳಿದ್ದರು. ಉಳಿದ ಎಲ್ಲಾ ಪ್ರಯಾಣಿಕರು ನೇಪಾಳದ ಪ್ರಜೆಗಳು ಎಂದು ವರದಿಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *