ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಇಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸಂಜೆ ಆಯೋಜಿಸಿರುವ ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲ ಚಿತ್ರರಂಗದ ಕಲಾವಿದರು ಒಟ್ಟಾಗಲಿದ್ದಾರೆ. ಅಷ್ಟೇ ಅಲ್ಲ, ಈ ಇವೆಂಟ್‌ಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡ ಭಾಗವಹಿಸುತ್ತಿದ್ದಾರೆ.
ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ೫೦ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಮಂದಿಗೆ ಮಾತ್ರವಲ್ಲ ನ್ಯಾಷನಲ್ ಸ್ಟಾರ್ ಯಶ್ ಸೇರಿದಂತೆ ಪರಭಾಷೆಯ ಸ್ಟಾರ್ ಕಲಾವಿದರಿಗೆ ಬರ್ತಡೇ ಆಮಂತ್ರಣವಿದೆ. ಇದೀಗ ವಿಜಯ್ ದೇವಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳು ಖುಷಿಪಡುವಂತಹ ಸುದ್ದಿ ಸಿಕ್ಕಿದೆ. ಕರಣ್ ಹುಟ್ಟುಹಬ್ಬಕ್ಕೆ ʻಗೀತ ಗೋವಿಂದಂʼ ಜೋಡಿ ಕೂಡ ಸಾಥ್ ಕೊಡಲಿದ್ದಾರೆ.
ಕರಣ್ ಜೋಹರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಯಶ್ ರಾಜ್ ಸ್ಟುಡಿಯೋದಲ್ಲಿ ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಇದೀಗ `ಖುಷಿ’ ಚಿತ್ರದ ಶೂಟಿಂಗ್ ಮುಗಿಸಿ, ಮುಂಬೈಗೆ ಬಂದಿರುವ ವಿಜಯ್ ಬಂದಿದ್ದಾರೆ. ಸಂಜೆ ನಂತರ ಬರ್ತಡೇ ಪಾರ್ಟಿಯಲ್ಲಿ ವಿಜಯ್ ಮತ್ತು ರಶ್ಮಿಕಾ ಕೂಡ ಭಾಗಿಯಾಗ್ತಿದ್ದಾರೆ. ಜೊತೆ ಲೈಗರ್ ನಟಿ ಅನನ್ಯ ಪಾಂಡೆ ಮತ್ತು ನಿರ್ಮಾಪಕಿ ಚಾರ್ಮಿ ಕೂಡ ಇರಲಿದ್ದಾರೆ. ಇದನ್ನೂ ಓದಿ: ಕಂಬಳ ಕುರಿತಾಗಿ ಕನ್ನಡದಲ್ಲಿ ಮತ್ತೊಂದು ಸಿನಿಮಾ: ಒಂದಕ್ಕೆ ರಿಷಭ್ ಮತ್ತೊಂದಕ್ಕೆ ರಾಜೇಂದ್ರ ಸಿಂಗ್ ಬಾಬು ಡೈರೆಕ್ಟರ್
ನಿರ್ಮಾಪಕ ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲ ಸ್ಟಾರ್ ನಟ ನಟಿಯರ ದಂಡೇ ಇರಲಿದೆ. ಯಾರೆಲ್ಲ ಬರಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.