ಪರಿಷತ್ ಅಭ್ಯರ್ಥಿಗಳ ಆಸ್ತಿ ವಿವರ – ಬಹುತೇಕರು ಕೋಟಿ ಒಡೆಯರು!

Public TV
4 Min Read
VIDHAN SHOUDHA

ಬೆಂಗಳೂರು: ಈಗಾಗಲೇ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿವೆ. ಬಹುತೇಕರು ಕೋಟ್ಯಧಿಪತಿಗಳೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ವಿವರ ಇಂತಿದೆ.

ಲಕ್ಷ್ಮಣ ಸವದಿ ಆಸ್ತಿ ವಿವರ: ಲಕ್ಷ್ಮಣ ಸವದಿ ಮತ್ತು ಪತ್ನಿ ಪುಷ್ಪಾ ಅವರ ವಾರ್ಷಿಕ ವರಮಾನ ವರ್ಷ ವರ್ಷ ಏರಿಕೆ ಆಗಿದೆ. 2016-17ರಲ್ಲಿ ಸವದಿ ವರಮಾನ 43.74 ಲಕ್ಷ ರೂ. ಇದ್ದರೇ ಅವರ ಪತ್ನಿ ಪುಷ್ಪಾ ವರಮಾನ 3.57 ಲಕ್ಷ ರೂ. ಆಗಿದೆ. ಐದು ವರ್ಷದ ಬಳಿಕ ಸವದಿ ಮತ್ತು ಪತ್ನಿ ಪುಷ್ಪಾ ವರಮಾನ ಎರಡು ಪಟ್ಟು ಹೆಚ್ಚಳವಾಗಿದೆ. 2020-21ರಲ್ಲಿ ಸವದಿ ವರಮಾನ 1.02 ಕೋಟಿ ರೂ. ಹಾಗೂ ಪತ್ನಿ ಪುಷ್ಪಾ ವರಮಾನ 5.40 ಲಕ್ಷ ವರಮಾನ ಇತ್ತು.

Laxman Savadi 1

ಸವದಿ ಬಳಿ ಇರುವ ಒಟ್ಟು ಚರಾಸ್ತಿ ಮೌಲ್ಯ 5.84 ಕೋಟಿ ರೂ. ಹಾಗೂ ಅವರ ಪತ್ನಿ ಬಳಿ ಇರುವ ಚರಾಸ್ತಿ ಮೌಲ್ಯ 54.21 ಲಕ್ಷ ರೂ. ಆಗಿದೆ. ಇನ್ನುಳಿದಂತೆ ಚಿನ್ನಾಭರಣಗಳು ಸವದಿ ಬಳಿ 60 ತೊಲೆ ಬಂಗಾರ, 4.5 ಕೆಜಿ ಬೆಳ್ಳಿ ಹಾಗೂ ಸವದಿ ಪತ್ನಿ ಬಳಿ 80 ತೊಲೆ ಬಂಗಾರವಿದೆ. ಸವದಿ ಸ್ಥಿರಾಸ್ತಿ ಮೌಲ್ಯ 29.59 ಕೋಟಿ ಮೌಲ್ಯ ಹಾಗೂ ಪತ್ನಿ ಸ್ಥಿರಾಸ್ತಿ ಮೌಲ್ಯ 30 ಲಕ್ಷ ರೂ. ಆಗಿದೆ. ವಿವಿಧ ಮೂಲಗಳಿಂದ ಮಾಡಿದ 1.81 ಕೋಟಿ ರೂ. ಸಾಲ ತೋರಿಸಿದ್ದಾರೆ. ಜೊತೆಗೆ ಪತ್ನಿ ಹೆಸರಲ್ಲಿ 1 ಲಕ್ಷ ರೂ. ಬೆಳೆ ಸಾಲವಿದೆ.

ಛಲವಾದಿ ನಾರಾಯಣ ಸ್ವಾಮಿ ಆಸ್ತಿ ವಿವರ: ಛಲವಾದಿ ಒಟ್ಟು 6 ಕೋಟಿಯ ಆಸ್ತಿ ಹೊಂದಿದ್ದಾರೆ. ಛಲಾವದಿ ಒಟ್ಟು ಚರಾಸ್ತಿ 23.09 ಲಕ್ಷ ರೂ. ಇದ್ದು, ಪತ್ನಿ ಸುನಂದಾ ಚರಾಸ್ತಿ 23.99 ಲಕ್ಷ ರೂ. ಇದೆ. ಛಲವಾದಿಯ ಸ್ಥಿರಾಸ್ತಿ ಮೌಲ್ಯ 5.85 ಕೋಟಿ ರೂ. ಆಗಿದ್ದು. ಅವರ ಪತ್ನಿ ಸುನಂದ ಅವರ ಬಳಿ ಸ್ಥಿರಾಸ್ತಿ ಇಲ್ಲ ಎಂದು ಉಲ್ಲೇಖವಾಗಿದೆ. ಛಲವಾದಿ ಸ್ವತ: ಖರೀದಿಸಿದ ಆಸ್ತಿ ಮೌಲ್ಯ 63.96 ಲಕ್ಷ ರೂ. ಆಗಿದೆ.

chalavadi narayanaswamy

ಹೇಮಲತಾ ನಾಯಕ ಆಸ್ತಿ ವಿವರ: ಪತಿ ಪರೀಕ್ಷಿತ ರಾಜ್ ನಾಯಕ್ ವಾರ್ಷಿಕ ವರಮಾನ ಸುಮಾರು 20 ಲಕ್ಷ ರೂ. ಹಾಗೂ 500 ಗ್ರಾಂ ತೂಕದ ಚಿನ್ನಾಭರಣ ಇದೆ. ಹೇಮಲತಾ ನಾಯಕ ಅವರ ಚರಾಸ್ತಿ 28.68 ಲಕ್ಷ ರೂ. ಇದ್ದರೆ, ಪತಿ ಚರಾಸ್ತಿ 1.75 ಲಕ್ಷ ರೂ. ಇದೆ. ಸ್ಥಿರಾಸ್ತಿ ಮೌಲ್ಯ 28 ಲಕ್ಷ ರೂ. ಇದೆ. ಇದನ್ನೂ ಓದಿ: ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ – ಸ್ಥಳೀಯರ ಆಕ್ರೋಶ

hemalatha nayak

ಕೇಶವ್ ಪ್ರಸಾದ್ ಆಸ್ತಿ ವಿವರ: ಕೇಶವ್ ಪ್ರಸಾದ್ ಅವರ ಚರಾಸ್ತಿ/ಸ್ಥಿರಾಸ್ತಿ ಮೌಲ್ಯ ಒಟ್ಟಾರೆಯಾಗಿ 89.58 ಲಕ್ಷ ಇದೆ. ಕೇಶವ್ ಪ್ರಸಾಸ್‍ಗಿಂತ ಪತ್ನಿ ಸಾವಿತ್ರಿಯೇ ಶ್ರೀಮಂತೆರಾಗಿದ್ದಾರೆ. ಪತ್ನಿ ಚರಾಸ್ತಿ/ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂ. ಇದೆ. ಇದನ್ನೂ ಓದಿ: ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್

ಜೆಡಿಎಸ್ ಅಭ್ಯರ್ಥಿ ಟಿ.ಎ ಶರವಣ ಕೋಟ್ಯಧಿಪತಿ: ಶರವಣ ಅವರು 41.79 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಶರವಣ ಪತ್ನಿಯಿಂದ 6 ಕೋಟಿ ರೂ. ಮತ್ತು ಪುತ್ರಿ ಶೃತಿಯಿಂದ 10 ಲಕ್ಷ ರೂ. ಕೈ ಸಾಲ ಪಡೆದಿದ್ದಾರೆ. ಒಟ್ಟು ಆಸ್ತಿ 41,79,64,103 ರೂ. ಇದೆ. ಶರವಣ ಹೆಸರಲ್ಲಿ 3,25,19,568 ರೂ ಚರಾಸ್ತಿ ಮತ್ತು 26,36,59,757 ರೂ ಸ್ಥಿರಾಸ್ತಿ ಇದೆ. ಪತ್ನಿ ಶೀಲಾದೇವಿ ಹೆಸರಲ್ಲಿ 6,87,87,184 ರೂ ಚರಾಸ್ತಿ ಹಾಗೂ 5,00,42,800 ರೂ ಸ್ಥಿರಾಸ್ತಿ ಇದೆ. ಹಾಗೂ ಪುತ್ರಿಯರಾದ ಶ್ರೇಯಾ ಹೆಸರಲ್ಲಿ 15,30,291 ರೂ., ಶೃತಿ ಹೆಸರಲ್ಲಿ 11,73,646 ರೂ., ಮತ್ತು ಪುತ್ರ ಸಾಯಿಪೃಥ್ವಿ ಹೆಸರಲ್ಲಿ 2,59,857 ರೂ ಚರಾಸ್ತಿ ಇದೆ. ಆದರೆ ಯಾರ ಹೆಸರಲ್ಲಿಯೂ ಸ್ಥಿರಾಸ್ತಿಯನ್ನು ಹೊಂದಿಲ್ಲ.

SHARAVANA

ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಜಬ್ಬಾರ್: ಒಟ್ಟು ಆಸ್ತಿಯ ಮೌಲ್ಯವು 6.95 ಕೋಟಿ ರೂ. ಇದ್ದು, ಚರಾಸ್ತಿ 45 ಲಕ್ಷ ರೂ. ಹಾಗೂ ಸ್ಥಿರಾಸ್ತಿ ಮೌಲ್ಯವು 6.50 ಕೋಟಿ ರೂ. ಇದೆ. ಇದರ ಜೊತೆಗೆ ನಗದು 50 ಸಾವಿರ ರೂ. ಇದೆ. ಈ ಪೈಕಿ ಪತ್ನಿ ಪರ್ವೀನಾ ಖಾನಂ ಹೆಸರಿನಲ್ಲಿಯ ಚರಾಸ್ತಿ 11.79 ಲಕ್ಷ ರೂ. ಹಾಗೂ ಸ್ಥಿರಾಸ್ತಿ 68 ಲಕ್ಷ ರೂ., ನಗದು 10 ಸಾವಿರ ರೂ., ಚಿನ್ನಾಭರಣ 250ಗ್ರಾಂ, 10 ಲಕ್ಷ ಮೌಲ್ಯದ ಟೊಯೊಟಾ ಇನ್ನೋವಾ ಕಾರು ಹಾಗೂ ಪತ್ನಿಯ ಹೆಸರಿನಲ್ಲಿ 71.36 ಲಕ್ಷ ಸಾಲವಿದೆ.

congress flag

ಕಾಂಗ್ರೆಸ್ ಅಭ್ಯರ್ಥಿ ಎಂ. ನಾಗರಾಜು ಯಾದವ್: ಒಟ್ಟು ಆಸ್ತಿಯ ಮೌಲ್ಯ 7.12 ಕೋಟಿ ರೂ. ಹಾಗೂ ಚರಾಸ್ತಿ- 1 ಕೋಟಿ ರೂ. ಹಾಗೂ ಸ್ಥಿರಾಸ್ತಿ 6.12 ಕೋಟಿ ರೂ. ಇದೆ. ಇದರ ಜೊತೆಗೆ ನಗದು 20 ಸಾವಿರವಿದೆ. ಈ ಪೈಕಿ ಪತ್ನಿ ರಾಜೇಶ್ರೀ ಹೆಸರಿನಲ್ಲಿ ಚರಾಸ್ತಿ 52.14 ಲಕ್ಷ ರೂ. ಹಾಗೂ ಸ್ಥಿರಾಸ್ತಿ 3.53 ಕೋಟಿ ರೂ. ಇದ್ದು, ನಗದು 20 ಸಾವಿರ, ಚಿನ್ನಾಭರಣ 550ಗ್ರಾಂ, 9 ಲಕ್ಷ ಮೌಲ್ಯದ ಇನ್ನೋವಾ ಕಾರು, 4.81 ಲಕ್ಷ ಮೌಲ್ಯದ ಫೋರ್ಡ್ ಫಿಗೊ ಕಾರು ಇದೆ. 3.53 ಲಕ್ಷ ರೂ. ಸಾಲವಿದೆ.

Share This Article
Leave a Comment

Leave a Reply

Your email address will not be published. Required fields are marked *