ಭಾರತದ ಸ್ಮಾರ್ಟ್ ಸಿಟಿ, 5ಜಿ ಯೋಜನೆಗೆ ಕೊಡುಗೆ ನೀಡಲು ಮುಂದಾದ ಜಪಾನ್

Public TV
1 Min Read
japan india

ಟೋಕಿಯೋ: ಭಾರತದ ಸ್ಮಾರ್ಟ್ ಸಿಟಿ ಹಾಗೂ 5ಜಿ ನೆಟ್‌ವರ್ಕ್ ಯೋಜನೆಗೆ ಜಪಾನ್ ಕೊಡುಗೆ ನೀಡುವುದಾಗಿ ಭರವಸೆ ನೀಡಿದೆ. ಈ ಮೂಲಕ ಭಾರತ-ಜಪಾನ್ ಸಹಕಾರಕ್ಕೆ ಹೊಸದೊಂದು ಆಯಾಮ ಸಿಗಲಿದೆ.

ಸೋಮವಾರ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮಾಹಿತಿ ಮಾಹಿತಿ ತಂತ್ರಜ್ಞಾನ ಕಂಪನಿ ಎನ್‌ಇಸಿ ಕಾರ್ಪೊರೇಶನ್ ಅಧ್ಯಕ್ಷ ನೊಬುಹಿರೊ ಎಂಡೋ ಭಾರತದಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.

smart city

ಸ್ಮಾರ್ಟ್ ಸಿಟಿ ದೃಷ್ಟಿಕೋನವಾಗಿ ನಾವು ಅಪ್ಲಿಕೇಶನ್‌ಗಳಂತಹ ಕೊಡುಗೆಗಳನ್ನು ನೀಡಬಹುದು ಹಾಗೂ 5ಜಿ ಯಂತಹ ಸಂವಹನ ವೇದಿಕೆಯನ್ನೂ ಒದಗಿಸಬಹುದು. ಈ ಎಲ್ಲಾ ಕ್ಷೇತ್ರಗಳಲ್ಲಿ ನಾವು ಈಗಾಗಲೇ ಪರಿಹಾರ ಹೊಂದಿದ್ದೇವೆ ಎಂದು ನೊಬುಹಿರೊ ಎಂಡೊ ಪ್ರಧಾನಿ ಮೋದಿಯೊಂದಿಗಿನ ಮಾತುಕತೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

ನಾವು ಅಪ್ಲಿಕೇಶನ್‌ಗಳನ್ನು ಕಾರ್ಯಗತಗೊಳಿಸಲು ಭಾರತದೊಂದಿಗೆ ಸಂವಹನ ನಡೆಸುವ ಅಗತ್ಯವಿದೆ. 5ಜಿ ವ್ಯವಸ್ಥೆಯನ್ನು ಒದಗಿಸಲು ಭದ್ರತೆ ಹಾಗೂ ಸುರಕ್ಷತೆಯನ್ನು ನಾವು ದೃಢೀಕರಿಸಬೇಕಿದೆ. ಇದಕ್ಕಾಗಿ ನಾವು ಭಾರತದ ಆಪರೇಟರ್‌ಗಳ ಸಹಯೋಗವನ್ನು ಹೊಂದಬೇಕಿದೆ ಎಂದರು.

modi tokyo

ನಾವು ಭಾರತದ ಸುಮಾರು 6,000 ಎಂಜಿನಿಯರ್‌ಗಳನ್ನು ಹೊಂದಿದ್ದೇವೆ. ಅವರು ನಮ್ಮೊಂದಿಗೆ ಸಾಕಷ್ಟು ನಿಕಟವಾಗಿ ಕೆಲಸ ಮಾಡುತ್ತಾರೆ. ನಾವು ಈ ಯೋಜನೆಯನ್ನು ಅವರೊಂದಿಗೆ ಮುಂದುವರಿಸಲು ಬಯಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ

ತಂತ್ರಜ್ಞಾನ ಮಾತ್ರವಲ್ಲದೇ ಇಬ್ಬರೂ ನಾಯಕರು ಕೈಗಾರಿಕಾ ಅಭಿವೃದ್ಧಿ, ತೆರಿಗೆ, ಕಾರ್ಮಿಕ ಕ್ಷೇತ್ರಗಳು ಸೇರಿದಂತೆ ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಕೈಗೊಳ್ಳಬಹುದಾದ ವಿವಿಧ ಸುಧಾರಣೆಗಳ ಕುರಿತು ಚರ್ಚಿಸಿದರು.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಭೇಟಿಗೆ ಟೋಕಿಯೋಗೆ ತೆರಳಿದ್ದಾರೆ. ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ 3ನೇ ಕ್ವಾಡ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *