ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?

Public TV
1 Min Read
GYANVAPI MOSQUE 2

ಲಕ್ನೋ: ವಾರಣಾಸಿಯ ಜಿಲ್ಲಾ ಕೋರ್ಟ್‍ನಲ್ಲಿ ಇಂದು ಕಾಶಿಯ ಜ್ಞಾನವಾಪಿ ಮಸೀದಿ ವಿಚಾರಣೆ ನಡೆಯೋ ಸಾಧ್ಯತೆ ಇದೆ. ಪ್ರಕರಣವನ್ನು ಸಿವಿಲ್ ಕೋರ್ಟ್‍ನಿಂದ ಜಿಲ್ಲಾ ಕೋರ್ಟ್‍ಗೆ ವರ್ಗಾಯಿಸಬೇಕು ಅಂತ ದೆಹಲಿ ಮೂಲದ ಮಹಿಳೆ ಕೇಳಿಕೊಂಡಿದ್ದರು. ಪ್ರಕರಣದ ಸಂಕೀರ್ಣತೆ, ಸೂಕ್ಷ್ಮತೆಯಿಂದಾಗಿ ಪ್ರಕರಣವನ್ನು ವರ್ಗಾಯಿಸ್ತಿದ್ದೇವೆ ಅಂತ ಸುಪ್ರೀಂಕೋರ್ಟ್ ಹೇಳಿತ್ತು. ಇನ್ನು, ಮಸೀದಿ ಒಳಗೆ ಪತ್ತೆಯಾದ ಶಿವಲಿಂಗದ ಬಗ್ಗೆ ಪರ-ವಿರೋಧ ಮುಂದುವರಿದಿದೆ.

SUPREME COURT

ಈ ನಡುವೆ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತರಾದ ಡಾ ಕುಲಪತಿ ತಿವಾರಿ ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಮೇಲಿನ ಕಪಾಟಿನಲ್ಲಿ ಸಣ್ಣ ಶಿವಲಿಂಗವನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇತ್ತೇ? ಮಧ್ಯಪ್ರದೇಶ ಸಚಿವರಿಗೆ ಸ್ವರಾ ಭಾಸ್ಕರ್ ಪ್ರಶ್ನೆ

ಮಸೀದಿಯ ನೆಲಮಾಳಿಗೆಯಲ್ಲಿ ಕಾಶಿ ವಿಶ್ವನಾಥನಿಗೆ ಹೊಂದಿಕೊಂಡಂತೆ ಮತ್ತೊಂದು ಶಿವಲಿಂಗ ಇದೆ. ನಾನು ಅದನ್ನು ನೋಡಿದ್ದೇನೆ. ಅದಕ್ಕೆ ಬೇಕಾದ ಸಾಕ್ಷ್ಯ ಇದೆ. ಅದು ಸ್ವಯಂಭೂ ಲಿಂಗವಾಗಿದೆ. ಅಲ್ಲಿ ಪೂಜೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಅಲ್ಲಿ ಶಿವಲಿಂಗವೇ ಇಲ್ಲ. 2024ರ ಚುನಾವಣೆಗೆ ಇಷ್ಟೆಲ್ಲಾ ಅಜೆಂಡಾ ಮಾಡ್ತಿದ್ದಾರೆ ಅಂಥ ಅಂತ ಎಸ್‍ಪಿ ಸಂಸದ ಶಫಿಕುರ್ ರಹಮಾನ್ ಬಾರ್ಗ್ ಹೇಳಿದ್ದಾರೆ.

Gyanvapi Mosque main

ಈ ಮಧ್ಯೆ, ಕಾಶಿಯ ಜ್ಞಾನವಾಪಿ, ಮಥುರಾ ಶಾಹಿ ಈದ್ಗಾ ಮಸೀದಿ ಬಳಿಕ ಇದೀಗ ಲಖನೌದ ಪ್ರಸಿದ್ಧ `ಟೀಲೆವಾಲಿ’ ಮಸೀದಿಯ ಮೇಲೂ ಹಿಂದೂ ಕಾರ್ಯಕರ್ತರು ದೃಷ್ಟಿ ಹರಿಸಿದ್ದಾರೆ. ಟೀಲೆವಾಲಿ ವಾಸ್ತವದಲ್ಲಿ ಲಕ್ಷ್ಮಣತಿಲಾ ಆಗಿದೆ. ಅಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತೇವೆ ಅಂತ ಹಿಂದೂ ಕಾರ್ಯಕರ್ತರು ಹೇಳಿದ್ದಾರೆ. ಇದನ್ನು ವಿರೋಧಿಸುವುದಾಗಿ ಮಸೀದಿಯಾ ಇಮಾಮ್ ಕೂಡ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

Share This Article
Leave a Comment

Leave a Reply

Your email address will not be published. Required fields are marked *