ಫ್ಯಾಟ್ ಸರ್ಜರಿಗೆ ಒಳಗಾಗಿ ಕಿರುತೆರೆ ನಟಿ ಚೇತನಾ ರಾಜ್ ಸಾವಿಗೆ ನಟಿ ಪ್ರಿಯಾಂಕಾ ಉಪೇಂದ್ರ ಸಂತಾಪ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾ ಕಮೆಂಟ್‌ಗಳಿಂದ ಹೀಗೆ ಆಗುತ್ತಿದೆ ಅಂತಾ ಪ್ರಿಯಾಂಕಾ ಚೇತನ್ ರಾಜ್ ಸಾವಿಗೆ ಧ್ವನಿಗೂಡಿಸಿದ್ದಾರೆ.
ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತಾ ಸಾಕಷ್ಟು ಕನಸುಗಳೊಂದಿಗೆ ಬಣ್ಣದ ಲೋಕದಲ್ಲಿ ಪರಿಚಿತರಾದ ನಟಿ ಚೇತನ್ ರಾಜ್ ಇತ್ತೀಚೆಗೆ ಫ್ಯಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಚೇತನಾ ಸಾವಿಗೆ ನಟಿ ರಮ್ಯಾ ಧ್ವನಿ ಎತ್ತಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಹೊಸ ಕಲಾವಿದರು ಸೈಜ್ ಜೀರೋ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬಾರದು. ಸಿನಿಮಾ ಮತ್ತು ಸೀರಿಯಲ್ ಮೇಕರ್ಸ್ ಬಾಡಿ ಬಗ್ಗೆ ಕಾಮೆಂಟ್ ಮಾಡಬಾರದು. ಆದರೆ ಸಿನಿಮಾರಂಗದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ತೊಂದರೆ ಆಗುತ್ತಿದೆ. ಸೋಷಿಯಲ್ ಮೀಡಿಯಾ ಕಾಮೆಂಟ್‌ಗೆ ಬಹಳಷ್ಟು ಜನ ತಲೆಕಡಿಸಿಕೊಳ್ತಾರೆ ಅದನ್ನು ಮೊದಲು ಬಿಡಬೇಕು ಎಂದು ಪ್ರಿಯಾಂಕ ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ
ಇನ್ನು ಚಿಕಿತ್ಸೆ ಪಡೆಯುವ ಮೊದಲು ತಂದೆ ತಾಯಿಗೆ ಮಾಹಿತಿ ನೀಡಬೇಕು. ಚೇತನಾ ಸಾವು ನನಗೂ ಶಾಕ್ ಕೊಟ್ಟಿದೆ. ಕೆಲ ದಿನಗಳ ಹಿಂದೆ ಮಲೆಯಾಳಂ ನಟಿ ಮತ್ತು ಬೆಂಗಾಳಿ ಚಿತ್ರರಂಗದ ನಟಿಯೊಬ್ಬರು ಸಾವನ್ನಪ್ಪಿದ್ದಾರೆ. ಬಹಳಷ್ಟು ಜನ ಅತಿಯಾದ ಫಿಟ್‌ನೆಸ್‌ನಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಟಿಯ ಸಾವಿಗೆ ಪ್ರಿಯಾಂಕ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಸಿನಿಮಾ ರಂಗದಲ್ಲಿ ನಟಿಯರು ಎದುರಿಸುವ ಸವಾಲಗಳ ರಮ್ಯಾ ಮಾತನಾಡಿದ್ರು, ಈ ರಮ್ಯಾ ಮಾತಿಗೆ ಪ್ರಿಯಾಂಕ ಧ್ವನಿಗೂಡಿಸಿದ್ದಾರೆ. ರಮ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದು ಸತ್ಯ ಚಿತ್ರರಂಗ ನಟಿಯರು ಕುರಿತು ಯೋಚಿಸುವ ರೀತಿ ಬದಲಾಗಬೇಕು ಎಂದು ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.