ಮತಾಂತರ ನಿಷೇಧ ಕಾಯ್ದೆಗೆ ಅಂಕಿತ ಬಿದ್ದರೂ ಕೊಡಗಿನಲ್ಲಿ ನಿಲ್ತಿಲ್ಲ ಮತಾಂತರ

Public TV
1 Min Read
madikeri matanthara 3

ಮಡಿಕೇರಿ: ಮತಾಂತರ ಕಾಯ್ದೆಗೆ ಈಗಾಗಲೇ ಅಂಕಿತ ಬಿದ್ದರೂ ಕೆಲವೊಂದು ಕಡೆ ರಾಜಾರೋಷವಾಗಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ನಡೆಯುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ.

madikeri matanthara 2

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮಕ್ಕೆ ಕೇರಳದಿಂದ ಬಂದ ದಂಪತಿ ಗ್ರಾಮದಲ್ಲಿ ಇರುವ ಬಡ ವರ್ಗದವರನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಕೆಎಲ್‌-12-ಎನ್‌2494 ಕಾರಿನಲ್ಲಿ ಕೊಡಗಿನ ಮಂಚಳ್ಳಿ ಗ್ರಾಮಕ್ಕೆ ಬಂದಿದ್ದ ದಂಪತಿ ಕೇರಳದ ಪಡಿಜ್ಞಾತ ಗ್ರಾಮದ ಕುರಿಯಚ್ಚನ್ ಹಾಗೂ ಸಲಿನಾಮ ದಂಪತಿ ಎನ್ನಲಾಗಿದೆ. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

madikeri matanthara

ಈ ದಂಪತಿ ಗ್ರಾಮಕ್ಕೆ ಬಂದು ಮತಾಂತರ ಮಾಡುವ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಕೊಡಗು-ಕೇರಳ ಗಡಿ ಗ್ರಾಮದಲ್ಲಿ ಮತಾಂತರ ಪ್ರಕರಣ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ. ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ದಂಪತಿ ಯತ್ನಿಸುತ್ತಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ದಂಪತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.madikeri matanthara 1

ಬಳಿಕ ಇಬ್ಬರನ್ನು ಕುಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಕುಟ್ಟ ಪೊಲೀಸರು ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.  ಇದನ್ನೂ ಓದಿ:  ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ 

Share This Article
Leave a Comment

Leave a Reply

Your email address will not be published. Required fields are marked *