ಬಂಧಿತ ಐಎಎಸ್ ಅಧಿಕಾರಿ ಜೊತೆಗಿದ್ದ ಅಮಿತ್ ಶಾ ಫೋಟೊ ಶೇರ್ – ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು

Public TV
1 Min Read
avinash das

ಅಹಮದಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈಚೆಗೆ ಬಂಧಿಸಿರುವ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಫೋಟೋ ಹಂಚಿಕೊಂಡಿದ್ದಕ್ಕಾಗಿ ಗುಜರಾತ್ ಪೊಲೀಸರು ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

AVINASH DAS TWITTER

ಅವಿನಾಶ್ ದಾಸ್ (46) ಅವರು ಮೇ 8 ರಂದು ಟ್ವಿಟ್ಟರ್‌ನಲ್ಲಿ ಅಮಿತ್ ಶಾ ಅವರು ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು ಎಂದು ಅಹಮದಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್‌ ಎಚ್.ಎಂ.ವ್ಯಾಸ್ ಹೇಳಿದ್ದಾರೆ. ಇದನ್ನೂ ಓದಿ: ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್‌

ಪೂಜಾ ಸಿಂಘಾಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು. ಆದರೆ ಕಳೆದ 5 ವರ್ಷಗಳ ಹಿಂದೆ ವೇದಿಕೆಯೊಂದರಲ್ಲಿ ಅಮಿತ್ ಶಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 5 ವರ್ಷಗಳ ಹಳೇ ಫೋಟೋವನ್ನು ದಾಸ್ ಹಂಚಿಕೊಂಡಿದ್ದಾರೆ. ಬಂಧನಕ್ಕೆ ಒಳಗಾಗಿರುವ ಅಧಿಕಾರಿಯ ಜೊತೆ ಇರುವ ಫೋಟೊ ಈಗ ಹಂಚಿಕೊಂಡು ಜನತೆಯ ದಾರಿ ತಪ್ಪಿಸಿದ್ದಾರೆ ಎಂದು ವ್ಯಾಸ್ ತಿಳಿಸಿದ್ದಾರೆ.

film maker avinash das

ಮೇ 8ರ ಟ್ವಿಟ್ಟರ್ ಪೋಸ್ಟ್‌ಗಾಗಿ ದಾಸ್ ವಿರುದ್ಧ ಐಪಿಸಿ 469 (ನಕಲಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮುನ್ನ ನಿರ್ದೇಶಕ ದಾಸ್ ಮಾರ್ಚ್ 17 ರಂದು ತಮ್ಮ ಫೇಸ್‌ಬುಕ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದಕ್ಕೂ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ್ ರಾಜ್ಯಸಭಾ ಟಿಕೆಟ್

ಕಳೆದ ಬುಧವಾರ ಇಡಿ ಜಾರ್ಖಂಡ್‌ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಅವರ ಮನೆಯಲ್ಲಿ 18 ಕೋಟಿ ಹಣವನ್ನು ಜಪ್ತಿ ಮಾಡಿ, ಅವರನ್ನು ಬಂಧಿಸಿತ್ತು.

ಬಾಲಿವುಡ್‌ನಲ್ಲಿ ಅವಿನಾಶ್ ದಾಸ್ ಅವರು ಗುರುತಿಸಿಕೊಂಡಿದ್ದು ಸ್ವರಾ ಭಾಸ್ಕರ್ ಅವರ `ಅನಾರ್ಕಲಿ ಆಫ್ ಆರಹ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *