ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಕಮ್ರಾನ್ ಅಕ್ಮಲ್

Public TV
1 Min Read
umaran malik

ಮುಂಬೈ: ಜಮ್ಮು ಮತ್ತು ಕಾಶ್ಮೀರ್‌ದ ಕ್ರಿಕೆಟಿಗ ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್-ಕೀಪರ್ ಬ್ಯಾಟ್ಸ್‍ಮ್ಯಾನ್ ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.

kamran akmal

ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‍ನಿಂದಲೇ ಈ ವರ್ಷದ ಐಪಿಎಲ್‍ನಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ಪ್ರಸ್ತುತ ಸನ್‍ರೈಸರ್ಸ್ ಹೈದರಾಬಾದ್ ತಂಡದ ಪರ ಆಟವಾಡುತ್ತಿರುವ ಈ ಯುವ ಆಟಗಾರನ ಪ್ರತಿಭೆಗೆ ಕ್ರಿಕೆಟ್ ಲೋಕದ ಅನೇಕ ದಂತಕಥೆಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅಕ್ಮಲ್, ಉಮ್ರಾನ್, ಪಾಕಿಸ್ತಾನದಲ್ಲಿದ್ದರೆ ಬಹುಶಃ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು. ಅವರ ಆರ್ಥಿಕತೆಯು ಉನ್ನತ ಮಟ್ಟದಲ್ಲಿದೆ. ಇದೀಗ ಐಪಿಎಲ್‍ನಲ್ಲಿ ವಿಕೆಟ್‍ಗಳನ್ನು ಪಡೆಯುತ್ತಿರುವುದರಿಂದ ಎಸ್‍ಆರ್‌ಹೆಚ್ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ ಎಂದರು. ಇದನ್ನೂ ಓದಿ: ಮಹಿಳಾ T20 ಚಾಲೆಂಜ್‍ಗೆ ದೀಪ್ತಿ, ಹರ್ಮನ್‍ಪ್ರೀತ್, ಮಂದಾನ ನಾಯಕಿಯರು – 3 ತಂಡ ಪ್ರಕಟಿಸಿದ ಬಿಸಿಸಿಐ

IPL 2022 KKR VS SRH

ಪ್ರತಿ ಪಂದ್ಯದ ಬಳಿಕ, ಉಮ್ರಾನ್‍ರ ಬೌಲಿಂಗ್ ಸ್ಪೀಡ್ ಚಾರ್ಟ್‍ನಲ್ಲಿ ಪ್ರತಿಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವುದು ಕಾಣುತ್ತದೆ. ಇದು ಕಡಿಮೆಯಾಗುವುದೇ ಇಲ್ಲ. ಭಾರತ ಕ್ರಿಕೆಟ್‍ನಲ್ಲಿರುವ ಅತ್ಯುತ್ತಮವಾದ ಪೈಪೋಟಿ ಇದು. ಈ ಮೊದಲು ಭಾರತ ಕ್ರಿಕೆಟ್ ಗುಣಮಟ್ಟದ ವೇಗಿಗಳ ಕೊರತೆ ಎದುರಿಸುತ್ತಿತ್ತು. ಆದರೆ, ಈಗ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್‍ಪ್ರೀತ್ ಬೂಮ್ರಾ ಅವರಂತಹ ಸಾಕಷ್ಟು ವೇಗಿಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

umran malik

ಸದ್ಯ ಈ ಬಾರಿಯ ಐಪಿಎಲ್‍ನಲ್ಲಿ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ಉಮ್ರಾನ್, ಅತ್ಯಂತ ವೇಗದ ಎಸೆತದ ಬೌಲರ್ ಎನಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಅವರು 12 ಪಂದ್ಯಗಳಿಂದ 18 ವಿಕೆಟ್ ಉರುಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *